Friday, September 10, 2010

ಮುಂದೆ ಏನಾಗ್ತಿ ?

 ನಿಮಗೆಲ್ಲರಿಗೂ  ಸ್ಕೂಲ್ ಅಲ್ಲಿ ಕಲಿಯಕಾರೆ  ಈ ಪ್ರಶ್ನೆನ ನಿಮ್ಮ  ಸರ್ ಗಳು ಕೇಳೆ ಕೇಳಿರ್ತ ಅಲ್ದಾ.?
ಆದ್ರೆ ಆ ಏಜ್  ಅಲ್ಲಿ  ಅದಕ್ಕೆ ಉತ್ರ ಕೊಡದು ಸಿಕ್ಕಾಪಟೆ ಕಷ್ಟ ಅಂತ ಅನ್ಸದಿಲ್ಯ? .ಎಂತಕೆ ಅಂದ್ರೆ ಅದು ಹಳ್ಳಿ ಆದ್ರೆ  ಅಪ್ಪ ಅಮ್ಮಂಗು ಅಷ್ಟು  ಜ್ಞಾನ ಇರ್ತಲ್ಲೇ .ಇನ್ತಿತಾದ್ ಓದಿದ್ರೆ ಹಿಂಗಿಂಗೆ ಅಗ್ಲಕ್ಕು ಅಂತ ಮಕ್ಳಿಗೆ ತಿಳಿ ಹೇಳವು ಹೇಳಿ..ಅವುಕ್ಕೆ ಗೊತ್ತಿರದು  ತೋಟ ನೋಡ್ಕ್ಯಂದು  ಇರ್ತಿ ,ಇಲ್ಲೇ ನಿಮ್ಮಂಗೆ ಟೀಚರ್ ಆಗ್ತಿ ಇದೆ ಇಡಿ ಕ್ಲಾಸ್ ನಲ್ಲಿಪ್ಪೋರೆಲ್ಲ ಹೇಳದು..ಹಿಂಗೆ ನಂ ಕ್ಲಾಸ್ ಅಲ್ಲೂ ಒಂದಿನ ಹೊಸ ಟೀಚರ್ ಯಾರೋ  ಬಂದೋರು  ಕೇಳ್ದ..ಒಬೊಬ್ರೆ ಎದ್ನಿನ್ತ್ಕಂಡು ಏನೇನಾಗ್ತಿ  ಮುಂದೆ ಹೇಳಿ ಅಂತ .ಎಲ್ಲ ಇಂಜಿನಿಯರ್,ಡಾಕ್ಟರ,ಟೀಚರ್ ಹಿಂಗೆ ಹೇಳ್ತಾ ಹೋದ..ನಂಗಂತೂ ಟೀಚರ್ ಅಪ್ಲೇ ಎಂತ ಓದವು..ಇಂಜಿನಿಯರ್ ಆಪ್ಲೆ  ಎಂತ ಓದವು ಹೇಳೇ ಗೊತ್ತಿರ್ಲೆ...ಪಕ್ಕದಲ್ಲಿ ಇಪ್ಪೋಳು ಟೀಚರ್ ಆಗ್ತಿ ಅಂದ ನಾನು ಅದೇ ಹೇಳ್ದಿ..ಮತ್ತೊಂದ್ ಸಲ ಮತ್ತೊಂದ್ ಟೀಚರ್ ಅದೇ ಪ್ರಶ್ನೆ ಕೇಳ್ದ ಅವಾಗ ಹೇಳಿದ್ದು ಇಂಜಿನಿಯರ್ ಆಗ್ತಿ ಹೇಳಿ.ಇದು ನನ್ನೋಬ್ಲುದ್ದೆ ಸಮಸ್ಯೆ ಅಲ್ಲ ಸುಮಾರ್ ಜನಕ್ಕೆ ಆಗಿರ್ತು ...ಹಿಂಗೆ ಕೆಳ್ಕೊತ ಹೊಗಕಾರೆ  ಒಬ್ಬವ ಹೇಳ್ದ ನಾನು ಮೊದ್ಲು ಮಾನವನಾಗ್ತಿ  ಹೇಳಿ..ಆ ಟೀಚರ್ ಏನು ಚಪ್ಪಾಳೆ ಹೊಡ್ಸಿದ್ದೆ ಹೊಡ್ಸಿದ್ದು...ಅದ್ರಲ್ಲಿ ಎಂತಿದ್ದು ಹೇಳೇ ಇದುವರೆಗೂ ಅರ್ತ ಆಗ್ಲೇ ಎಲ್ಲರು ಮನವನಾಗೆ  ಅಲ್ದಾ ಮುಂದೆನಾದ್ರು  ಆಗದು...

ಮತ್ತೆ ಪಿ.ಯು.ಸಿ  ನಲ್ಲಿ science ತಗಂಡ್ರೆ ಮುಂದೆ ಹಿಂಗಾಗ್ಲಕ್ಕು  commerce ತಗಂದ್ರೆ  ಹಿಂಗಾಗ್ಲಕ್ಕು ಆರ್ಟ್ಸ್ ತಗಂಡ್ರೆ ಹಿಂಗಾಗ್ಲಕ್ಕು  ಹೇಳೋ ಅಂತ ವಿಚಾರನು ಸುಮಾರ್ ಜನಕ್ಕೆ ಗೊತ್ತಿರ್ತೆಲ್ಲೇ..ಆ ಸರ್ ಗಳು ನೀವು ಏನಾಗ್ತಿ ಅನ್ನೋದಕ್ಕಿಂತ ನೀವು ಮುಂದೆ ಇನ್ತಿನ್ತದು ಓದಿರೆ ಹಿಂಗೆ ಅಗ್ಲಕ್ಕು ಅಂತ ಜ್ಞಾನೋದಯ ಮಾಡ್ಸದು ಒಳ್ಳೇದು ಅಂತ ಅನುಸ್ತಲ್ಯ?