Saturday, December 24, 2011

ಹ್ಯಾಪಿ ಕ್ರಿಸ್ಮಸ್

ರಾತ್ರಿ ಊಟ ಮುಗಿಸಿ ಬಂದು ಸುಮ್ಮನೆ ನೆಟ್ ಅಲ್ಲಿ ಏನೋ ಸರ್ಚ್ ಮಾಡ್ತಿದ್ದೆ . ಜೋರಾಗಿ ಸ್ಲಿಪ್ಪರ್ ಶಬ್ದ ಮಾಡ್ತಾ ಒಬ್ಳು ಹುಡುಗಿ ನಮ್ಮ ರೂಮ್ ಗೆ ಬಂದ್ಲು. ಏನಾಯ್ತಪ್ಪ ಇವ್ಳಿಗೆ ಅಂತ ಬಾಗಿಲ ಕಡೆ ನೋಡ್ದೆ .ವಳಗೆ ಬರ್ಲಾ ಅಂದ್ಲು ಸ್ಲಿಪ್ಪೆರ್ ಹಾಕೊಂಡೆ ಬರ್ಲಾ ಅಂದ್ಲು .ಹ್ಮ್ಮ್ ಅಂದೆ .ಓಡಿ ಬಂದ ರಭಸಕ್ಕೆ ಮಾತಾಡಲು ಆಗ್ತಿಲ್ಲ ಅವಳ್ಗೆ. ಆಮೇಲೆ ಸುಧಾರಿಸ್ಕೊಂದು ವಾವ್ ನಿಮ್ ರೂಮ್ ತುಂಬಾನೇ ದೊಡ್ಡದಿದೆ ಹಾಗೆ ಹೀಗೆ ಅಂದ್ಲು. 

ಯಪ್ಪಾ ತಾಯಿ ಬಂದಿದ್ ವಿಷ್ಯ ಏನು ಹೇಳ್ಬಾರ್ದ ಅಂತ ಮನಸಲ್ಲೇ ಅಂದ್ಕೋತಿದ್ದೆ. ಅಸ್ಟರಲ್ಲೇ  ಸ್ಟಾರ್ಟ್ ಮಾಡಿದ್ಲು . ನಾವೊಂದು ಗೇಮ್ (ಅದೇ ಚಿಟಿ ಲಿ ಎಲ್ಲರ ಹೆಸರನ್ನು ಬರ್ಯೋದು..ಆಮೇಲೆ ಅದ್ರಲ್ಲಿ ಒಬೋಬ್ರು ಒಂದೊಂದು ಚೀಟಿ  ತಗೊಂಡು ಯಾರ ನೇಮ್ ಇದೆ ಅದ್ರಲ್ಲಿ ನೋಡ್ಬೇಕು .ಆಮೇಲೆ ಒಂದು ಬಾಕ್ಸ್ ಇಟ್ಟಿರ್ತಾರೆ ಅದ್ರಲ್ಲಿ ನಮ್ ಹೆಸರು ಹಾಕದೆ ಯಾರ ಹೆಸರು ಬಂದಿರುತ್ತೋ ಅವ್ರ ಹೆಸರು ಹಾಕಿ ಲೆಟರ್ ಬರಿಬೋದು .ಫ್ರೊಂ  ಯುವರ್ ಸೆಕ್ರೆಟ್ ಫ್ರೆಂಡ್ ಅಂತ. ಆಮೇಲೆ ಅದನ್ನ ಅ ಬಾಕ್ಸ್ ಗೆ ಹಾಕ್ಬೇಕು ಯಾರಿಗೂ ಗೊತ್ತಾಗದ ಹಾಗೆ. ಡಿಸೆಂಬರ್ ೨೫ ರ ವರೆಗೂ ಹೀಗೆ ಮಾಡಿ ಅವತ್ ನೈಟ್ ನಮ್ಮ ಪರಿಚಯ ಅ ಚಿಟಿ ಲಿ ಇದ್ದ ಫ್ರೆಂಡ್ ಗೆ ಮಾಡಿಸಿ ಏನಾದ್ರು ೧೦೦ ಟು ೨೦೦ ವಳಗಿಂದು ಗಿಫ್ಟ್ ಕೊಡ್ಬೇಕು..) ಆಡ್ತಿದ್ದಿವಿ.ಬರ್ತಿರ ನೀವು ಅಂದ್ಲು. ಯಾವುದಕ್ಕೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ,ಯಾರ ಜೊತೆಯೂ ಅಸ್ಟು ಬೆರೆಯದ ನಾನು ಬರ್ತೀನಿ ಅಂದಿದ್ದೆ ..ಅವಳ ಮಾತಿನ ಮೊಡಿಯೇ ಹಾಗಿತ್ತು ಎನ್ನಿ.ಹೇಗೆ ಆಡೋದು ಅಂತ ಗೊತ್ತಲ್ವ ಅಂದ್ಲು ಗೊತ್ತು ಅಂದೆ  . ಕುಶಿ ಆಯಿತು ಅವಳ್ಗೆ ಮತ್ತೆ explain  ಮಾಡೋದ್ ತಪ್ತು ಅಂತ. 

೧೫ ನಿಮಿಷ ಬಿಟ್ಟು ಕೆಳಗೆ ಬನ್ನಿ ಅಂತ ಹೇಳಿ  ಹೊದ್ಲು .ನಂ ರೂಂ ಮೇಟ್  ಕೆಳಗಡೆ ಹೊದ್ಲು. ನಾನ್ ಹೊಗ್ಲಿಲ್ಲ (ಕೆಳಗ್ ಯಾರ್ ಹೋಗ್ತಾರೆ ಅಂತ ಸೋಮಾರಿ ) ಅವಳೇ ಒಂದು ಚೀಟಿ ನನಗು ತಂದ್ಕೊಟ್ಲು.ಓಪನ್ ಮಾಡ್ದೆ ಮಾಧುರಿ ಅಂತ ನೇಮ್ ಇತ್ತು . ಈ ಹುಡುಗಿ ಯಾರು ಅಂತನು ಗೊತ್ತಿಲ್ಲ ಮುಖನು ನೋಡಿಲ್ಲ ಏನ್ ಬರಿಲಿ,ಏನ್ ಗಿಫ್ಟ್ ಕೊಡ್ಲಿ ಅಂತ ರೂಮ್ ಮೆಟ್ ಕೇಳ್ದೆ.ನಾಳೆ  ತೋರಿಸ್ತೀನಿ ಅಂದ್ಲು ..

22 ನೇ ತಾರೀಕು : ಹ್ಮ್ಮ್ ಮರ್ದಿನ ಆಯ್ತು ಯಾರವಳು ಅಂತ ನೋಡೋಕ್ ಹೋಗ್ಲಿಲ್ಲ. ಸುಮ್ನೆ ಲೆಟರ್ ಬರ್ದೇ.ಫಸ್ಟ್ ಟೈಮ್ ಗೊತ್ತಿಲ್ದೆ ಇರೋರ್ಗೆ ಲೆಟರ್ ಬರಿತಿರೋದು ಮಜಾ ಅನಿಸ್ತು.ಕೆಳಗೆ ಹೋಗಿ ಹುಡುಕ್ದೆ ಡಬ್ಬಿ ಕಾಣಿಸ್ಲಿಲ್ಲ.ಹೊರಗಡೆ ಸ್ವಲ್ಪ ಕೆಲಸ ಇದ್ದಿದ್ರಿಂದ ನಂ ರೂಮ್ ಮೇಟ್ ಗೆ ನಿಮ್ ಲೆಟರ್ ಹಾಕ್ಬೇಕಿದ್ರೆ ಇದನ್ನು  ಹಾಕಿ ಅಂತ ಕೊಟ್ಟೆ. ಸಂಜೆ ಮತ್ತೆ ರೂಮ್ ಗೆ ಬಂದು ಟೆರಾಸ್ ಮೇಲೆ  ವಾಲ್ಕಿಂಗ್ ಮಾಡ್ತಿದ್ದೆ.ಶೀಬ ಅನ್ನೋ ಹುಡುಗಿ ಬಂದು ಅ ದಬ್ಬಿಲಿ ನಿಮ್ಗೂ ಒಂದ್ ಲೆಟರ್ ಬಂದಿದೆ ತಗೋಳಿ ಅಂದ್ಲು . ಹೇಗಿದ್ರು ನನ್ನು ಯಾರಿಗೂ ಗೊತ್ತಿರಲ್ಲ  ಏನ್ ಬರ್ದಿರ್ಬೋದು ಅಂತ ಕುತೂಹಲದಿಂದ ನೋಡಿದ್ರೆ ಫುಲ್ ಪರಿಚಯ ಇರೋ ತರಾ ಬರ್ದಿದಾಳೆ  ಅ ಹುಡುಗಿ ..ಯಾರಿರ್ಬೋದು ?!?

23 ನೇ ತಾರೀಕು :  ಮತ್ತೊಂದ್ ಲೆಟರ್ ಬರ್ದು ಡಬ್ಬಿಗೆ ಹಾಕ್ತಿದ್ದೆ ಅಸ್ಟರಲ್ಲಿ ಅದರೊಳಗೆ ಫ್ರಾಮ್ ಯುವರ್ ಸೆಕ್ರೆಟ್ ಚಯ್ಲ್ದ್ ಟು ಅನುಷಾ ಅಂತ ಇತ್ತು ..ನಾನು  ನಿನ್ನೆ ಬರದಿದ್ ಲೆಟರ್ ನಂಗೆ ವಾಪಸ್.ಮೇಲೆ ತಂದು ಓದಿದರೆ  ನಾನು ನಿನ್ನೆ ಬರ್ದಿದ್ದಕ್ಕೆ ರಿಪ್ಲೈ ಬಂದಿತ್ತು ವೊವ್..ಅವಾಗ್ಲೇ ಗೊತಾಗಿದ್ದು ನಂಗೆ ಕೊಟ್ಟಿದ್ ಲೆಟರ್ ಗು ರಿಪ್ಲೈ ಮಾಡ್ಬೇಕು ಅಂತ .ರಾತ್ರಿ ಊಟ ಮಾಡಿ ರಿಪ್ಲೈ ಮಾಡಿ ಡಬ್ಬಿಗೆ ಹಾಕಿ ಬಂದು ಒಂದೆರಡು ಫ್ರೆಂಡ್ಸ್ ನ ಕೇಳ್ದೆ ಏನ್ ಗಿಫ್ಟ್ ಕೊಟ್ರೆ ಚನಾಗಿರತ್ತೆ ಅಂತ . ಅದ್ರು ಅವರೆಲ್ಲ ಹೇಳಿದ್ದು ಯಾಕೋ ಇಷ್ಟ ಆಗ್ಲಿಲ್ಲ.ತಮ್ಮನ ಕೇಳ್ದೆ .ಗೊಂಬೆ ಕೊಡೆ ಅಂದ..ಒಹ್ ಹೇಗಿದ್ರು ಹುಡ್ಗಿರ್ಗೆ ಗೊಂಬೆ ಅಂದ್ರೆ ಇಷ್ಟ ಆಗೇ  ಆಗತ್ತೆ ಅದ್ನೆ ಕೊಡೋದು ಅಂತ ಅಂದ್ಕೊಂಡು ಎಲ್ ಸಿಗುತ್ತೋ ಗೊಂಬೆ ಅಂದೆ.ಯಾವ್ದಾದ್ರು ಫೂಟ್ ಪಾತ್ ಅಂಗಡಿಲಿ ನೋಡು ಅಂದ.ನಮ್ ಏರಿಯ ಲಿ ಇಲ್ಲ ಅಂದೆ.ಪಕ್ಕದಲ್ಲಿ ವೈನ್ ಶಾಪ್ ಇದ್ದೆ ಇರುತ್ತೆ  ಹೋಗ್ ಒಂದ್ ೯೦ ಹಾಕೊಂಡ್ ಮಲ್ಕೋ ಅಂದ.(ಅವ್ನು ಏನೇ ಕೇಳಿದ್ರು ಇ ಏರಿಯ ಲಿ ಇಲ್ಲ ಅಂತೀನಿ ಅದಕ್ಕೆ ಹಾಗೆ ಹೇಳಿದ್ದು  ) ತೆಪ್ಪುಗೆ  ಮಲ್ಕೊಂಡೆ .

24 ನೇ ತಾರೀಕು : ಇವತ್ ಲೆಟರ್ ಬರದಿದ್ ಸಾಕು ಅಂತ ಒಂದು ಜೆಲ್ ಪೆನ್ ಗೆ ಅವಳ ನೇಮ್ ಅಂಟಿಸಿ ಡಬ್ಬಿಗೆ ಹಾಕಿ ಫ್ಯಾಬ್ ಮಾಲ್ ಗೆ ಹೋದೆ.ಡೈರೆಕ್ಟ್ ಗೊಂಬೆ ಇರೋ ಅಲ್ಗೆ ಹೋಗಿ ಒಂದು ಬೆಕ್ಕಿನ ಗೊಂಬೆ ಪಿಂಕ್ ಕಲರ್ ದು ನೋಡ್ದೆ ಸಿಕಾಪಟ್ಟೆ ಮುದ್ದಾಗಿತ್ತು ..ಆದ್ರೆ ರೇಟ್ ಜಾಸ್ತಿ ಅನಿಸ್ತು ..(ನಾನು ಒಬ್ಬಳೇ ಹೋಗಿದ್ದು ಬೇರೆ.ನನ್ನ ಕಣ್ಣಿಗೆ ಕಾಣೋದೆ  ಬೆಕ್ಕು ,ನಾಯಿ,ಮಂಗ, ಈ ತರದ ಪ್ರಾಣಿಗಳು, ಹುಳಗಳದ್ದೆ ಗೊಂಬೆ) ಅದನ್ನ ಫ್ರೆಂಡ್ ಹುಟ್ಟಿದ ಹಬ್ಬಕ್ಕೆ ಕೊಡೋಣ ಅಂದ್ಕೊಂಡ್ ಒಂದು ಪುಟಾಣಿ ಗೊಂಬೆ ತಗೊಂಡ್ ಗಿಫ್ಟ್ ಪ್ಯಾಕ್ ಮಾಡಿಸಿ ವಾಪಾಸ್ ರೂಮ್ ಗೆ ಬಂದೆ ..

೨೫ನೇ ತಾರೀಕು:ಅವತ್ತು ಗೇಮ್ ಅಡ್ತಿದೀವಿ ಅಂತ ಬಂದು ಹೇಳಿದವಳು ಇವತ್ ಬಂದು ಇವತ್ ನೈಟ್ ಪಾರ್ಟಿ ಇರತ್ತೆ ೯ ಗಂಟೆಗೆ ಬನ್ನಿ ಕೆಳಗೆ. ಪಾರ್ಟಿ ಗೆ ಕೇಕ್ ತರ್ತಿದಿವಿ ಒಬೋಬ್ರು ೬೦ ರುಪಿ  ಕೊಡ್ಬೇಕು ಅಂದ್ಲು. ಕೊಟ್ಟೆ..ವೈಟ್ ಡ್ರೆಸ್ ಹಾಕೋ ಬನ್ನಿ.ಫುಲ್ ವೈಟ್ ಬೇಕು ಅಂತ ಇಲ್ಲ ಜೀನ್ಸ್ ಮೇಲೆ ವೈಟ್ ಟಾಪ್ ಆದ್ರು ಓಕೆ ಅಂತ ಹೇಳಿ ಹೋದ್ಲು . ೨ ನಿಮಿಷ ಬಿಟ್ಟು ಮತ್ತೆ ವಾಪಾಸ್ ಬಂದು ಅಪ್ಪಿಕೊಂಡು ಹ್ಯಾಪಿ ಕ್ರಿಸ್ಮಸ್ ಅಂತ ಹೇಳಿ ಹೋದ್ಲು.


ಈ ಗೇಮ್ ನ ನಾವು ಹೈ ಸ್ಕೂಲ್  ಲಿ ಇದ್ದಾಗ ಕೆಲವೊಂದು ಹಬ್ಬಕ್ಕೆ ಆಡ್ತಿದ್ವಿ..ಆ ದಿನಗಳೆಲ್ಲ ನೆನಪಾಯ್ತು ಇವತ್ತು ..ಲಗೋರಿ ಆಡ್ಬೇಕಿದ್ರೆ  ಅಂತು ಅರ್ದ ಮಂಕಾಳೆ ರೋಡ್ ವರೆಗೂ ಓಡಿ ಹೋಗ್ತಿದ್ವಿ  . ಮತ್ತೆ ಯಾವ್ದೋ ೪ ಮನೆ ಹಾಕೊಂಡ್ ಆಡ್ತಿದ್ವಿ ಅದೆಲ್ಲಾ  ಈಗ ಮರ್ತೊಗಿದೆ. ಈಗ ಯರತ್ರಾದ್ರು  ಆತರ ಆಟಗಳನ್ನ ಆಡೋಣ ಬನ್ನಿ ಅಂದ್ರೆ ನಗ್ತಾರೆ. ನಾವೇನ್ ಚಿಕ್ ಮಕ್ಳಲ್ಲ ಅದ್ನ ಆಡೋಕೆ ಅಂತ . ಮೊನ್ನೆ ಹೀಗೆ ಚಾಟ್ ಮಾಡ್ಬೇಕಿದ್ರೆ  ಆಟ ಆಡ್ತಿದಿನಿ ಅಂದೆ..ಇಷ್ಟು ದೊಡ್ಡ ಆದ್ರುನು ಇನ್ನು ಚಿಕ್ಕ ಮಕ್ಕಳ ಆಟ  ಆಡೋದ್ ಬಿಟ್ಟಿಲ್ಲ ನೀನು ಅಂದ್ರು ..ಈ ತರದ  ಆಟಗಳನ್ನ ಚಿಕ್ಕ ಮಕ್ಳು ಮಾತ್ರ ಆಡಬೇಕು ಅಂತ ಹೇಳ್ದೋರ್ ಯಾರು ಅಂತೀನಿ..ಆಟಗಳನ್ನ ಆಡೋದು ನಮ್ಮ ಮೈಂಡ್ ರೆಫ್ರೆಶ್ಮೆಂಟ್ ಗೆ ತಾನೆ. ಕೆಲವು ದೊಡ್ಡವರು  ದುಡ್ಡು ಕಟ್ಟಿ ಆಡೋ ಜೂಜು, ಇಸ್ಪೀಟ್,ರೇಸ್ (ಅದರಿಂದ  ಮನೆ ಸಂಸಾರವನ್ನು ಹಾಳು ಮಾಡಿಕೊಳೊದಕ್ಕಿಂತ ) ಗಿಂತ ಈ ತರದ ಆಟಗಳು ಒಳ್ಳೇದಲ್ವ.


Monday, December 12, 2011

ಮನಸ್ಸು

 •  ಅವತ್ತು ರೈಲಿನಲ್ಲಿ ಹೋಗೋವಾಗ ಹಬ್ಬದ ಟೈಮ್ .ಸೀಟ್ ಸಿಗದೆ ನಿಂತಿದ್ದೆ ಪಕ್ಕದಲ್ಲೇ ಸಿಂಗಲ್ ಸೀಟ್ ಅಲ್ಲಿ ಕುಳಿತಿದ್ದ ಅಂಕಲ್ ಸ್ವಲ್ಪ ಸರಿದು ಜಾಗ ಕೊಟ್ರು .ಅಡ್ಜಸ್ಟ್ ಮಾಡಿಕೊಳೋದರ  ಕಷ್ಟವನ್ನು ನಾನು ತುಂಬಾ ಸಲ ಅನುಭವಿಸಿದ್ದೇನೆ. ಮಂಡ್ಯ ಬರೋ ವರೆಗೂ ಕೆಳಗಾದರು ಕೂರೋಣ ಅನಿಸುತ್ತಿತ್ತು .ಆದರು ಹೇಗೋ ಕುಳಿತಿದ್ದೆ .ಅಷ್ಟರಲ್ಲಿ  ಸೀಟ್ ಸಿಗ್ತು ಸದ್ಯ 
 • ತುಂಬಾ ಜನಕ್ಕೆ ಚಪಾತಿ ಮಾಡೋವಾಗ ಕಾಪಿ ಪೇಸ್ಟ್ ಮಾಡೋಕೆ ಬಂದಿದ್ದರೆ ಎಷ್ಟು ಚನ್ನಾಗಿರುತ್ತಿತ್ತು..
 • ಪಕ್ಕದಲ್ಲಿ ಬುಕ್ ಇದೆ ನಾಳೆ ಇಂದ ಓದೋಕೆ ಸ್ಟಾರ್ಟ್ ಮಾಡೇ ಮಾಡ್ತೀನಿ
 • ಮನೆಗೆ ಕಾಲ್ ಮಾಡಬೇಕು ಹೇಗಿದ್ರು ಮನೆ ಮಿತ್ರ ಲ್ಯಾಂಡ್ ಲೈನ್ ಫ್ರೀ. ಬೇಡ ಬೇಡ ಮನೆ ಇಂದ ಮಿಸ್ ಕಾಲ್ ಬಂದಮೇಲೆ ಮಾಡಿದ್ರಾಯ್ತು
 • ಯಾರ ಹತ್ತಿರನೋ  ಮಾತಾಡಬೇಕಿತ್ತು ಇನ್ನು ಮಾತಾಡಿಲ್ಲ .ಇವತ್ತು ರಾತ್ರಿ ಏನೇ ಕೆಲಸ ಇದ್ದರು ಮಾತಾಡಲೇ ಬೇಕು
 • ಈಗ ಸೇಬು ಹಣ್ಣು ಇದ್ದಿದ್ರೆ ಎಸ್ಟ್ ಚನ್ನಾಗಿ ಇರೂದು .ರೇಟ್ ಜಾಸ್ತಿ ಮಾಡಿದಾರೆ ಛೆ
 • ಹೊರಗಡೆ ಕಾಣ್ತಿರೋ ಪಾರಿವಾಳ ನಾ ಆಗಿದ್ರೆ ಎಸ್ಟೊಂದು ಜಾಗ ಗಳನ್ನ ನೋಡ್ಬೋದಿತ್ತು  ಅದು ಫ್ರೀ ಆಗಿ  
 • ಅವತ್ತು ನೋಡಿದ ಕಡಗೊಲಿನ ಫೋಟೋ ತೆಕ್ಕೋ ಬರಬೇಕಿತ್ತು.
 • ಈ ಸಿಟಿ ಹುಡುಗೀರು ಯಾಕಪ್ಪ ಇಸ್ಟ್ ಸಕತಾಗ್ ಇರ್ತಾರೆ ...ಅದು ಒಳ್ಳೇದೆ ಅವ್ರ ಜೊತೆ ನಾವ್ ಹೋದ್ರೆ ಎಸ್ಟ್ ಹುಡುಗರನ್ನ ಬೇಕಾದರು ನೋಡ್ಬೋದು.ಆ ಹುಡುಗರ ಕಣ್ಣೆಲ್ಲ ಹೇಗಿದ್ರು ಆ ಸುಂದರವಾದ ಹುಡುಗಿಯ ಮೆಲಿರತ್ತಲ್ಲ.
 •  ಕಾರ ಕಾರದ್ ಚಿತ್ರಾನ್ನ , ಪುಳಿಒಗರೇ ವಾವ್ 
 • ಇವತ್ತು ಮಾಲ್ ಗೆ ಹೋದಾಗ ಒಂದು ಚಂದದ ಟಾಪ್ ತಗೋಬೇಕು .ಅವತ್ತು ಹೊರಗಡೆ ನಿಲ್ಲಿಸಿದ್ದ ಗೊಂಬೆಗೆ ಹಾಕಿದ್ರಲ್ಲ ಅತರದ್ದು.
 • ಊಊ ಚಳಿ ಆಗ್ತಿದೆ ಯಾರ್ ಎದ್ದೋಗಿ ಫ್ಯಾನ್ ಆಫ್  ಮಾಡ್ತಾರೆ ಬೇಜಾರು

  ಏನೇನೋ ಇದೆ ಒಂದಕ್ಕೊಂದು ಸಂಬಂದವೇ  ಇಲ್ಲ  ಆದರೆ ಇದು ಮನಸ್ಸಿಗೆ ಸಂಬಂದ ಪಟ್ಟಿದ್ದು ..ದೇಹ ಇಲ್ಲೇ ಇದ್ರೂ ಎಲ್ಲೆಲ್ಲೋ ಓಡಾಡ್ತಿರತ್ತೆ ಈ  ಮನಸ್ಸು.ಮಾಡೋ ಕೆಲಸದಲ್ಲಿ ಆಸಕ್ತಿ ಇಲ್ಲ ಅಂದ್ರೆ ಕೈ ಕೆಲಸ ಮಾಡ್ತಿದ್ರು ಮನಸ್ಸು ಬೇರೆಲ್ಲೋ ಇರತ್ತೆ. ಕಿವಿ ಬೇರೆಯವರು ಹೇಳೋದನ್ನ ಕೇಳ್ತಿದ್ರು ಮನಸ್ಸು ಮತ್ತೇನೋ ಯೋಚಿಸುತ್ತಿರುತ್ತೆ .ಮನಸ್ಸು ಅನ್ನೋದು ಒಂದು ವಯಸ್ಸಿಗೆ ಸಂಬಂದ ಪಟ್ಟಿದ್ದಲ್ಲ .. ಹುಚ್ಚು  ಕೊಡಿ ಮನಸ್ಸು ಅದು ೧೬ ರ ವಯಸ್ಸೇ ಆಗಬೇಕೆಂದೇನು ಇಲ್ಲ.೧೬ ರ ವಯಸ್ಸಿನಲ್ಲಿ ಸ್ವಲ್ಪ ಜಾಸ್ತಿ ಹುಚ್ಚು ಹುಚ್ಚಾಗಿ ಆಡಿಸುತ್ತದೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ತರ ಯೋಚನೆಗಳು.ವಯಸ್ಸಿಗೆ ತಕ್ಕಂತೆ ಮನಸ್ಸಿನ ಯೋಚನೆ ಗಳು ಬದಲಾಗುತ್ತೆ.ಈ ಮನಸ್ಸನ್ನು ಕಂಟ್ರೋಲ್ ಮಾಡಲು  ದ್ಯಾನ ,ಯೋಗಾಸನದಿಂದ ಸಾದ್ಯ. ಆದರೆ ದಿನನಿತ್ಯ ಅದನ್ನು ಮಾಡಲು ಮನಸ್ಸೂ ಒಪ್ಪಬೇಕಲ್ಲ .ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ಸ್ಸ್ ....


  Saturday, November 19, 2011

  ಬಾಲ್ಯ

             ಆ ಉರು ಅಲ್ಲಿ ೨೧ ಹವ್ಯಕ ಮನೆ ಇರೋ ಸಾಲ್ಗೆರಿ . ಮದ್ಯದಲ್ಲಿ ಒಂದು ಪುಟ್ಟ ಹ೦ಚಿನ ಮನೆ. ಅದರಲ್ಲಿ ಅಡುಗೆ  ಮನೆ , ಉಟದ್ ಮನೆ , ದೇವರ ಕೋಣೆ, ನಡು ಮನೆ , ಜಗಲಿ, ಹೊರ ಜಗಲಿ , ನೀರು ಸೇದೋ ಬಾವಿ , ಮೆತ್ತು , ಮೇಲ್ಮೆತ್ತು , ಕೋಣೆಗಳು ಇನ್ನು ಏನೇನೋ ... ಮನೇಲಿ ಇದ್ದಿದ್ದು ೬ ಜನ .
  ಮುಸ್ಸಂಜೆ ಹೊತ್ತಲ್ಲಿ ಹೊರ ಜಗಲಿಲಿ ಕುಳಿತುಕೊಂಡು ರಸ್ತೆ ಲಿ ಹೋಗೋರ್ನ ನೋಡ್ಕೊಂಡು ಅಜ್ಜ ಹೇಳ್ತಿದ್ದಿದ್ ಕತೆ ಕೇಳೋ  ಮಜಾ ನೆ ಬೇರೆ . ಆ ಕಾಗಕ್ಕ ಗುಬ್ಬಕ್ಕನ್ ಕತೆ , ಅಡುಗೋಲಜ್ಜಿ ಕತೆ ದಿನ ತಿರ್ಸಿ ಮುರ್ಸಿ ಅದೇ ಕತೆ ಹೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನಿಸ್ತಿತ್ತು.. ಆ ಮನೆಯಲ್ಲಿ , ಆ ಊರಲ್ಲಿ ಆಟ ಆಡಿದ್ದು ಅಸ್ಟಿಸ್ಟಲ್ಲ .  ಫ್ರೆಂಡ್ ನ ಬ್ರೇಕ್ ಇಲ್ದಿರೋ ಸೈಕಲ್ ಅಲ್ಲಿ ಕುರುಸ್ಕೊಂದು ಬಿಳ್ಸಿದ್ದು...


  ಜೋಕಾಲಿ ಲಿ ಮಳ್ಳಾಟ ಮಾಡೊಕ್ ಹೋಗಿ ತಮ್ಮನ ಕಾಲು ಮುರಿದಿದ್ದು.ಸ್ಕೂಲ್ ಗೆ ಹೋಗಬೇಕಾದ್ರೆ ಹೈ ಸ್ಕೂಲ್ ಮೇಸ್ಟ್ರು ನನ್ನ ಜಡೆಗೆ ಫ್ರೆಂಡ್ ಜಡೆ ಕಟ್ಟಿ ಹಕ್ದಾಗ  ಬಿಡಿಸಿ ಕೊಳ್ಳೋಕೆ  ಒದ್ದಾಡ್ತಿದ್ದಿದ್ದು .. ಮನೇಲಿ ಫೋನ್ ಕನೆಕ್ಷನ್ ಇಲ್ದೆ ಇದ್ದಿದ್ರಿಂದ ಯಾರದ್ದಾದ್ರೂ  ಫೋನ್ ಬಂದ್ ತಕ್ಷಣ ಭಟ್ರ ಅಂಗಡಿಗೆ  ಓಡ್ತಿದ್ದಿದ್ದು ,
  ಗೇರು ಪೀಟ ಒಣಗೋ ಮುಂಚೆ ಹಸಿ ಇರುವಾಗಲೇ  ಕಾಲಲ್ಲಿ ಒತ್ತಿ ತಿಂದು ಅಮ್ಮನ ಹತ್ರ ಬೈಸ್ಕೊಂಡಿದ್ದು .. ಜಂಬೆ ಮರದ ಮೇಲೆ ಹತ್ತಿ ಮಲ್ಗೊವ ಮಾವಿನಕಾಯಿ ಉಪ್ಪು ಕಾರ ಹಾಕೊಂಡ್ ತಿಂದಿದ್ದು ..ನೀರಿನ ಟ್ಯಾಂಕ್ ಒಳಗೆ ಅಡ್ಗೆ ಆಟ ಆಡಿದ್ದು .. ಗೊಬ್ರದ್ ಗುಂಡಿಲಿ ಈಜೋದ್ ಕಲ್ತಿದ್ದು ... ಕಂಬ ಕಂಬ ಆಟ ,ನೆಲ ಬೆಂಚ್ , ಪಗಡೆ ಆಡಿದ್ದು, ಇಸ್ಪೀಟ್ ಅಲ್ಲಿ ಮನೆ ಕಟ್ತಿದ್ದಿದ್ದು .
   


  ರೈಲ್(ಟಿಕೆಟ್ ತಗೊಳ್ದೆ ) , ಆಟೋ, ಬಸ್ ಬೈಕ್  ಹೀಗೆ ಸ್ವಲ್ಪ ದಿನ ಒಂದೊಂದ್ರಲ್ಲಿ ಸಾಗರ ಸ್ಕೂಲ್ ಗೆ ಹೋಗಿದ್ದು... ಪೀಟಿ ಬಾಲಕ್ಕೆ ದಾರ ಕಟ್ಟಿ  ಹಾರಿಸ್ತಿದಿದ್ದು , ದರೆ ಮೇಲಿನ   ಜಾಗದಲ್ಲಿ ಗಾಳಿ ಪಟ ಹಾರ್ಸಿದ್ದು .. ಮಳೆಗಾಲದಲ್ಲಿ ನೀರಲ್ಲಿ ನೆನೆದಿದ್ದು , ಬಿಕ್ಕೆ ಗುಡ್ಡದಲ್ಲಿ ಬಿಕ್ಕೆ ಹಣ್ಣು  ಹೆಕ್ತಿದ್ದಿದ್ದು ..ಅಬ್ಬ ಎಸ್ಟೊಂದು ಮಜಾ ಇತ್ತು ಬಾಲ್ಯದಲ್ಲಿ ...ಈಗ  ಆ ಮನೆ ನನ್ನದಲ್ಲ, ಅಜ್ಜ ಈಗಿಲ್ಲ ,ನನ್ನ ದಿನಚರಿಯು ಬದಲಾಗಿದೆ ...ಆದರು ಆ ಮನೆ, ಆ ಜನ, ಆ ಅಜ್ಜ ,ಆ ತುಂಟಾಟ ಬೇಕು ಎನಿಸುತ್ತೆ.. ಇದೆ ಅಲ್ವ ಬಾಲ್ಯ ಅಂದ್ರೆ ..

  Thursday, May 19, 2011

  ಮರೆಯಲಾಗದ ದಿನಗಳು

  ಒಹ್ !! ೪ ವರ್ಷ ಹೇಗ್ ಕಳಿತು  ಅಂತಾನೆ ಗೊತಾಗ್ತಿಲ್ಲ .ಆಗಸ್ಟೆ ಪಿ.ಯು .ಸಿ ಮುಗಿಸಿ ಇಂಜಿನಿಯರಿಂಗ್ ಸೇರಿದ್ದ ದಿನಗಳವು. ಕಾಲೇಜ್ ಅಲ್ಲಿ ಸೀಟ್ ಸಿಕ್ಕಿದ ಕುಶಿ ಒಂದು ಕಡೆ .ಆದರೆ ಜೊತೆಗೆ ಯಾರು ಗೊತ್ತಿರುವವರಿಲ್ಲ ಎಂಬ  ಆತಂಕ ಒಂದು ಕಡೆ. ಹೀಗಿರುವಾಗಲೇ ೨  ದಿನಕ್ಕೆ ಕಾಲೇಜ್ ಸ್ಟಾರ್ಟ್ ಆಗಿತ್ತು .. ಕಾಲೇಜ್ ಬಸ್ ಇದ್ದಿದ್ದ ರಿಂದ ಹೋಗೋದಕ್ಕೆ ಏನು ತೊಂದರೆ ಆಗ್ಲಿಲ್ಲ .
  ಆದರು ಹೆಚ್ಚು ಮಾತನಾಡದ ನನಗೆ ಕ್ಲಾಸ್  ಎಲ್ಲಿ ಎಂದು  ಗೊತ್ತಾಗದಿದ್ದರೆ ,ಯಾರು ನನ್ನಮಾತಾಡಿಸದಿದ್ದರೆ ಎಂದು ಏನೇನೋ ತಲೆಯಲ್ಲಿ ಅನಿಸುತ್ತಲೇ  ಇತ್ತು . ಅಸ್ಟರಲ್ಲೇ  ಕಾಲೇಜ್ ಎದುರಿಗೆ ಬಸ್ ಬಂದಿತ್ತು ಅದು ಗೊತ್ತಿಲ್ಲದ ಯಾವ್ಯಾವ್ದೋ  ಏರಿಯ ಸುತ್ತಾಕಿಕೊಂಡು ..ಅಸ್ಟೊಂದು ಬಸ್ ಇದೆ ಯಾಕೆ ಇಷ್ಟು ಬಳಸಿಕೊಂಡು ಹೋಗ್ಬೇಕು ಅಂತ ಕೋಪ ಬೇರೆ ಬಂತು .(ಆದರೆ ನನಗೇನು ಗೊತ್ತಿತ್ತು ನನಗೆ ಕ್ಲೋಸ್ ,ಬೆಸ್ಟ್ ಆಗೋ ಫ್ರೆಂಡ್ ಈ  ಬಸ್ ಸುತ್ತಾಕಿಕೊಂಡು ಬಂದರೆ  ಸಿಗುತ್ತಾಳೆ ಎಂದು). ಯಾರು ಗೊತ್ತಿಲ್ಲ ಬಸ್ ಇಳಿದೆ.
  ಹಿಂದಿನಿಂದ ನಮ್ಮ  ಬಸ್ ನೆ ಇಳ್ಕೊಂಡ್ ಬಂದು ನೀನು information science ಅಲ್ವ ಅಂದ್ಲು . ಹಿಂದಿನ  ದಿನ  uniform ಅಳತೆ ಕೊಡೋವಾಗ ನನ್ನ ಮುಂದೆ  ಇದ್ಲು ಅವ್ಳು .ಆಗ ಸ್ವಲ್ಪ ಮಾತಾಡಿದ್ವಿ . ಅದ್ರು ಅವಳಾಗೇ ಮಾತಾಡಿಸದಿದ್ರೆ  ನನಗೆ ಅವಳೇ ಇವಳು  ಅಂತ ಗೊತಾಗ್ತಿರ್ಲಿಲ್ವೇನೋ . ನನ್ನ ಜೊತೆ ಇದ್ದವಳಿಗೆ ಅವಳ ಕಾಲೇಜ್ ಇಂದ ಬಂದ  ತುoಬ  ಜನ ಗೊತ್ತಿತ್ತು ಏನೇನೋ ಮಾತಾಡ್ತಿದ್ಲು ..ನಾನು ಮನಸ್ಸಿನಲ್ಲೇ ಇವರ್ಯಾರು ನಮ್ ಬ್ರಾಂಚ್ ಆಗೋದು ಬೇಡ ಅನ್ಕೊತ್ತಿದ್ದೆ :D . ಫಸ್ಟ್ ದಿನ,ಸೆಕೆಂಡ್ ದಿನ, ಮದ್ಯ ಮದ್ಯ ಇಂಟರ್ನಲ್ಸ್ exams   ಹೀಗೆ ಮುಗಿದೋಯ್ತು ೧ ವರ್ಷ. ಊಟನು ಕಾಲೇಜ್ ಅಲ್ಲಿ ಕೊಡ್ತಿದ್ರಿಂದ ಬೆಳಗ್ಗೆ ಅಮ್ಮ ನಿಗೆ ತಿಂಡಿ ಮಾಡ್ಕೊದೋ ಕೆಲಸ  ಇರ್ಲಿಲ್ಲ .
  ೨ ನೆ ವರ್ಷ  ನಾವಿಬ್ರೇ ಇರ್ತಿದ್ವಿ ಅಸ್ಟೇನು ಚನಾಗಿರ್ಲಿಲ್ಲ ಕಾಲೇಜ್ ಅಂದ್ರೆ ಬೋರ್ ಆಗ್ತಿತ್ತು .maths lecturer  ಬೇರೆ ಸ್ಟ್ರಿಕ್ಟ್ ಇದಿದ್ರಿಂದ ಕಾಲೇಜ್ ಗೆ bunk  ಮಾಡೋ ಹಾಗು ಇರ್ಲಿಲ್ಲ .ಕಾಲೇಜ್ ಗೆ ಹೋಗಿಲ್ಲ ಅಂದ್ರೆ imposition ಬರಿಬೇಕಿತ್ತು ಚಿಕ್ ಮಕ್ಳು ತರ . ಒಂದು ದಿನ ಕಾಲೇಜ್ ಡೇ time ಅಲ್ಲಿ bunk ಮಾಡ್ಬೇಕಿದ್ರೆ ಯಾವ್ದೋ ಬಾಯ್ಸ್ mike ಅಲ್ಲಿ ಬೇರೆ ಹೆಸರು ಕೂಗಿ ಕರ್ದಿದ್ರು :p .... ಹುಂ ಹೀಗೆ  ೨ನೆ  ವರ್ಷ  ಕೂಡ ಮುಗಿತು .
  ೩ನೆ ವರ್ಷ ದಿಂದ  ಕಾಲೇಜ್ ಅಂದ್ರೆ ಏನು ಅಂತ ಗೊತಾಗೋಕೆ  ಶುರು  ಆಗಿದ್ದು. ನಮ್ಮಿಬ್ಬರ  ಜೊತೆ  ಇನ್ನು  ೪ ಜನ ಬಂದ್ರು ..ಮೆಹೆಂದಿ ಹಾಕೊಂಡು ಕುಶಿ ಪಟ್ವಿ .. 

  ಕ್ಲಾಸ್ ನವ್ರೆಲ್ಲ seri ಕೊಡಚಾದ್ರಿ ಟ್ರಿಪ್ ಹೋದ್ವಿ . ನಮ್ ನಮ್ಮಲ್ಲೇ ಲವ್ ಲೆಟರ್ ಬರ್ಕೊತಿದ್ವಿ.ಒಬ್ರನ್ನ ಒಬ್ರು ರೆಗಿಸ್ಕೊಂದು ಚನಾಗಿ ಕಾಲ ಕಳೆದ್ವಿ ..ಕೆಲವು hudgir ಜೊತೆ ಶ್ರೀರಂಗ ಪಟ್ನ ಹೋಗಿದ್ವಿ  ..birthday ಪಾರ್ಟಿ ಆಚರಿಸಿದ್ವಿ.

  ತುಂಬಾನೇ ಎಂಜಾಯ್ ಮಾಡಿದ್ವಿ ...ಇಂಟರ್ನಲ್ಸ್ ಅಲ್ಲಿ ಕಾಪಿ ಹೋಡುದ್ವಿ...ಲ್ಯಾಬ್ exam ಅಲ್ಲಿ ಕಷ್ಟ ಪಟ್ವಿ  output ಬರ್ಸೋಕೆ ...ಯಾವಾಗ ೪ನೆ ವರ್ಷ ಬರುತ್ತೋ ಅನ್ಸೋಕೆ ಸ್ಟಾರ್ಟ್  ಆಯ್ತು .ಹುಂ ೩ನೆ  ವರ್ಷ  ಮುಗಿತು.
   ೪ನೆ ವರ್ಷ ೭ಥ್ ಸೆಂ ಇನ್ನೊಂದೇ ಸೆಂ ಅನ್ನೋ ಕುಶಿಲೆ ಅದೇನೋ ಹೇಗೋ ಕಳೀತು ..೮ನೆ ಸೆಂ starting ಇಂದಾನೆ ಬೇಜಾರು ಎಲ್ಲರನ್ನು ಮಿಸ್ ಮಡ್ಕೋತಿವಲ್ಲ ಅನ್ನೋ dukka ಎಲ್ಲಾ ದಿನಾನು ಎಂಜಾಯ್ ಮಾಡಿದ್ವಿ .. ಈಸಲಿನು ಟ್ರಿಪ್ ಮುಳ್ಳಯ್ಯನ್ ಗಿರಿ ಬೆಟ್ಟ ಮತ್ತೆ ಹಬ್ಬೆ ಫಾಲ್ಸ್ ಗೆ ಹೋಗಿದ್ವಿ .. ಸಿಕಪಟೆ ಚನಾಗಿತ್ತು ...
   
  ಯಾವ ವರ್ಷನು ಕಾಲೇಜ್ ಡೇ ಗೆ ಹೋಗದೆ ಇರೋರು ಈ ಸಲ ಫುಲ್ ಮುಗಿಯೋ ತನಕ ಇದ್ವಿ.  saree ಡೇ ಮಾಡಿದ್ವಿ ..ರೋಜ್ ಡೇ ಮಾಡಿದ್ವಿ  .ಅಬ್ಬ ಈ ೪ ವರ್ಷದಲ್ಲಿ ಅದೆಸ್ಟು ಫೋಟೋ ತೆಗ್ಸ್ಕೊಂಡಿದ್ದು , ಅದೆಷ್ಟು ಆಟ ಆಡಿದ್ದು ಮರೆಯೋಕಾಗಲ್ಲ .ಈಗ autograph ಬರೆಸೋ  ಭರಾಟೆ ನಡೀತಿದೆ ..ಈ sendoff ಅನ್ನೋದು ಯಾಕೆ ಮಾಡ್ತಾರೋ ಏನೋ ತುಂಬಾನೇ ಮನಸಿಗೆ ಕಿರಿಕಿರಿ ಆಗತ್ತೆ ..ನಮ್ಮವರನ್ನೆಲ್ಲ ಕಳ್ಕೊತಿದಿವೇನೋ ಅನ್ಸತ್ತೆ ..ಫ್ರೆಂಡ್ಸ್ ಹೇಳ್ತಾರೆ ಎಲ್ಲ ಒಟ್ಟಿಗೆ ಇದ್ಬಿಡನ ಅಂತ ಅದೆಲ್ಲ ಅಗೋ ಮಾತಾ?.ಏನೋ ಮನಸ್ಸಿನ ನೆಮ್ಮದಿಗೆ ಹೇಳ್ಕೋಬೇಕು .. ಹುಂ ಇದೆ sendoff  ನಾಡಿದ್ದು ಮಂಗಳವಾರ ಇದೆ. ನೆನೆಸಿಕೊಂಡರೆ ಅಳು ಬರತ್ತೆ . ಮಿಸ್ you ಆಲ್ ..


  Friday, January 14, 2011

  ಚಿ೦ಗಮ್ ಮಾಡಿದ ಅವಾಂತರ ;'(

   ಕಾಲೇಜ್ ಗೆ ರಜೆ ಇದ್ದ ಕಾರಣ ೭ ದಿನಗಳ ಮಟ್ಟಿಗೆ ಊರಿಗೆ ಹೋಗಿದ್ದೆ.೨ನೆ ತಾರೀಕು ನಾನು ಓದಿದ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಇದ್ದ ಕಾರಣ ನಾನು ನನ್ನ ಉರಿನವಳಾದ ಒಬ್ಬಳು ಹೊಗುವುದೆ೦ದು ನಿಶ್ಛ್ಯಿಯಿಸಿದ್ದೆವು.ಎಷ್ಟೆ ಎ೦ದರು ಓದಿದ ಸ್ಛೂಲ್ ಗೆ ಹೊಗುವುದೆ೦ದರೆ ಕುಶಿ ತಾನೆ.ಎಸ್ಟೊ ವರುಷದ ನ೦ತರ ಎಸ್ಷ್ತೊ೦ದು ಹಳೆ ಮುಖಗಳನ್ನು ಹೊಸದಾಗಿ ನೋಡಬಹುದು.ಎರೆಡರ೦ದು ನಾನು ಅಜ್ಜನ ಮನೆಲಿದ್ದ ಕಾರಣ ನಾನು ಅಲ್ಲಿ೦ದಲೆ ಸಾಗರಕ್ಕೆ ಬರುವುದು ಅವಳು ಊರಿನಿ೦ದ ಸಾಗರಕ್ಕೆ ಬರುವುದೆ೦ದು ಹಿ೦ದಿನ ದಿನ ರಾತ್ರಿ ನಿಶ್ಛಯಿಸಿದೆವು.ನನ್ನ ಬಸ್ಸು ಊರಿನ ಬಸ್ಸಿಗಿ೦ತ ಕಾಲು ಗ೦ಟೆ ಬೇಗ ಬ೦ದಿದ್ದರಿ೦ದ ಹಿಮಾಲಯ ಕೂಲ್ ಡ್ರಿನ್ಕ್ಸ್ ಪಕ್ಕದ ಅ೦ಗಡಿಯಲ್ಲಿ ಹಾಕಿದ್ದ chair ಲಿ ಕುಳಿತು ಅವಳ ಬಸ್ ಗೆ ಕಾಯುತ್ತಿದ್ದೆ.ಸುಮ್ಮನೆ ಕಾಯುವುದೆ೦ದರೆ ಎಸ್ಟಾದರು ಬೇಜಾರು ತಾನೆ ಹಾಗೆ ೨ ಚಿ೦ಗಮ್ ತೆಗೆದುಕೊ೦ಡು ಒ೦ದನ್ನು ಬಾಯಿಯಲಿಟೆ.ಅಸ್ಟರಲ್ಲಿ ಅವಳು ಬ೦ದಿದ್ದರಿ೦ದ ಅವಳಿಗು ಒ೦ದು ಚಿ೦ಗಮ್ ಕೊಟ್ಟು ವರದಳ್ಳಿಯ ಕ್ರಾಸ್ ಗೆ ಹೋಗೊ ಬುಸ್ಸ್ ಹತ್ತಿದೆವು.ಅಲ್ಲಿ೦ದ ೨ ಕಿ.ಮೀ ಅಗಬಹುದು ನಮ್ಮ ಸ್ಛೂಲ್ ಗೆ.ಕ್ರಾಸ್ ಇ೦ದ ನಡೆಯೊದು ನಮ್ಮ ಉದ್ದೇಶವಾದರು ನಮ್ಮ ಉರಿನವರದ್ದೆ ಕಾರ್ ಬ೦ದಿದ್ದರಿ೦ದ ನಡೆಯುವುದು ತಪ್ಪಿತ್ತು.ನಾವು ಹೈಸ್ಛೂಲ್ ನಲ್ಲಿ ಇದ್ದಾಗ ನಮ್ಮ ಸ್ಛೂಲ್ ಹೇಗಿತ್ತೆ೦ದರೆ ಪ್ರತಿಯೊ೦ದು ಕ್ಲಾಸ್ ಗು ಒ೦ದೊ೦ದು ಕುಟೀರ.ಪ್ರತಿಯೊಬ್ಬರು ಕೂರುವ ಹಿ೦ದೆಯು ಬಿಳಿ ಬೊರ್ಡ್.ಈಗ ಸಲ್ಪ ಬದಲಾವಣೆಯಾಗಿದೆ.ಇ ಪ್ರೊಗ್ರಾಮ್ ಸ೦ದರ್ಭದಲ್ಲಿ ಪ್ರತಿಯೊ೦ದು ಕುಟೀರದಲ್ಲು ಎನೆನೊ ಇತ್ತು.(ಒ೦ದರಲ್ಲಿ ವಸ್ತು ಮತ್ತೆ Sanskrit ದಲ್ಲಿ ಅದರ ಹೆಸರು.ಪ್ರತಿಯೊ೦ದರಲ್ಲು ೩ ವಿದ್ಯಾರ್ಥಿಗಳು ಹೀಗೆ ಪ್ರತಿಯೊ೦ದರಲ್ಲು ಒ೦ದೊ೦ದು.)ಹೀಗೆ ಒ೦ದು ಕುಟೀರಕ್ಕೆ ಹೋದಾಗ ಒಬ್ಬ ಇನ್ನು ೮ ನೇ ತರಗತಿ ಇರಬಹುದು.ಅಕ್ಕ ನೀವು ಹಳೆ ವಿದ್ಯಾರ್ಥಿ ನ ಎ೦ದ..ಯಾಕಪ್ಪ ಇವನು ಹೀಗೆ ಕೆಳ್ತಿದಾನೆ.ಇಸ್ಟೊತ್ತನಕ ನೊಡಿದ್ದೆಲ್ಲ ಹೇಗಿದೆ ಎನೆನ್ ನೊಡ್ದೆ ಎಲ್ಲ ಬರೆಯೊಕೆ ಕೆಳ್ತಿದಾನ ಎನೊ.ಬ೦ತಲ್ಲ ಗ್ರಹಚಾರ ಎ೦ದುಕೊ೦ಡು ಹು ಎ೦ದೆ.ತಕ್ಷಣ ಅವನಿ೦ದ ಬ೦ದ ಪ್ರಶ್ನೆ ಅಕ್ಕ ಹಾಗಿದ್ರೆ ಗೊತ್ತಿಲ್ವ ನಿಮ್ಗೆ ಕ್ಲಾಸ್ ಲಿ ಚಿ೦ಗಮ್ ತಿನ್ಬಾರ್ದು ಅ೦ತ ?? ಅ೦ದ.ಛೆ ಅಷ್ಟು ತಲೆ ಬೇಡ್ವ ನನ್ಗೆ ಎ೦ದು ತಲೆಗೆ ಹೊಡ್ಕೊ೦ಡು sorry ಎ೦ದೆ.(ಅವನು ಕೇಳೋ ತನಕ ಬಾಯಲ್ಲಿ ಚಿಂಗಮ್  ಇರೋದೇ ಮರೆತೋಗಿತ್ತು :'(   )ಅವತ್ತಿ೦ದಲೆ ಕೊರೆಯಲಾರ೦ಬಿಸಿತು ನನ್ನ ತಲೆಯಲ್ಲಿ ,ಎಲ್ಲೊಯ್ತು ಸ್ಕುಲ್ ನಲ್ಲಿ ನೀಡಿದ ಆ ಶಿಕ್ಷಣ.ಇದು ಬರಿ ಸ್ಕುಲ್ ನಲ್ಲಿ ಅಲ್ಲ ಎಲ್ಲ ಕಡೆಗು ಬೇಕು ತಾನೆ ಅಷ್ಟು ಸಾಮಾನ್ಯ ಜ್ನಾನ.ಅಷ್ಟು ಪಾಲಿಸದಿದ್ದರು ಇಷ್ಟು ಚಿಕ್ಕ ವಿಷಯ ... ಹುಮ್ ಛೆ.