Thursday, May 19, 2011

ಮರೆಯಲಾಗದ ದಿನಗಳು

ಒಹ್ !! ೪ ವರ್ಷ ಹೇಗ್ ಕಳಿತು  ಅಂತಾನೆ ಗೊತಾಗ್ತಿಲ್ಲ .ಆಗಸ್ಟೆ ಪಿ.ಯು .ಸಿ ಮುಗಿಸಿ ಇಂಜಿನಿಯರಿಂಗ್ ಸೇರಿದ್ದ ದಿನಗಳವು. ಕಾಲೇಜ್ ಅಲ್ಲಿ ಸೀಟ್ ಸಿಕ್ಕಿದ ಕುಶಿ ಒಂದು ಕಡೆ .ಆದರೆ ಜೊತೆಗೆ ಯಾರು ಗೊತ್ತಿರುವವರಿಲ್ಲ ಎಂಬ  ಆತಂಕ ಒಂದು ಕಡೆ. ಹೀಗಿರುವಾಗಲೇ ೨  ದಿನಕ್ಕೆ ಕಾಲೇಜ್ ಸ್ಟಾರ್ಟ್ ಆಗಿತ್ತು .. ಕಾಲೇಜ್ ಬಸ್ ಇದ್ದಿದ್ದ ರಿಂದ ಹೋಗೋದಕ್ಕೆ ಏನು ತೊಂದರೆ ಆಗ್ಲಿಲ್ಲ .
ಆದರು ಹೆಚ್ಚು ಮಾತನಾಡದ ನನಗೆ ಕ್ಲಾಸ್  ಎಲ್ಲಿ ಎಂದು  ಗೊತ್ತಾಗದಿದ್ದರೆ ,ಯಾರು ನನ್ನಮಾತಾಡಿಸದಿದ್ದರೆ ಎಂದು ಏನೇನೋ ತಲೆಯಲ್ಲಿ ಅನಿಸುತ್ತಲೇ  ಇತ್ತು . ಅಸ್ಟರಲ್ಲೇ  ಕಾಲೇಜ್ ಎದುರಿಗೆ ಬಸ್ ಬಂದಿತ್ತು ಅದು ಗೊತ್ತಿಲ್ಲದ ಯಾವ್ಯಾವ್ದೋ  ಏರಿಯ ಸುತ್ತಾಕಿಕೊಂಡು ..ಅಸ್ಟೊಂದು ಬಸ್ ಇದೆ ಯಾಕೆ ಇಷ್ಟು ಬಳಸಿಕೊಂಡು ಹೋಗ್ಬೇಕು ಅಂತ ಕೋಪ ಬೇರೆ ಬಂತು .(ಆದರೆ ನನಗೇನು ಗೊತ್ತಿತ್ತು ನನಗೆ ಕ್ಲೋಸ್ ,ಬೆಸ್ಟ್ ಆಗೋ ಫ್ರೆಂಡ್ ಈ  ಬಸ್ ಸುತ್ತಾಕಿಕೊಂಡು ಬಂದರೆ  ಸಿಗುತ್ತಾಳೆ ಎಂದು). ಯಾರು ಗೊತ್ತಿಲ್ಲ ಬಸ್ ಇಳಿದೆ.
ಹಿಂದಿನಿಂದ ನಮ್ಮ  ಬಸ್ ನೆ ಇಳ್ಕೊಂಡ್ ಬಂದು ನೀನು information science ಅಲ್ವ ಅಂದ್ಲು . ಹಿಂದಿನ  ದಿನ  uniform ಅಳತೆ ಕೊಡೋವಾಗ ನನ್ನ ಮುಂದೆ  ಇದ್ಲು ಅವ್ಳು .ಆಗ ಸ್ವಲ್ಪ ಮಾತಾಡಿದ್ವಿ . ಅದ್ರು ಅವಳಾಗೇ ಮಾತಾಡಿಸದಿದ್ರೆ  ನನಗೆ ಅವಳೇ ಇವಳು  ಅಂತ ಗೊತಾಗ್ತಿರ್ಲಿಲ್ವೇನೋ . ನನ್ನ ಜೊತೆ ಇದ್ದವಳಿಗೆ ಅವಳ ಕಾಲೇಜ್ ಇಂದ ಬಂದ  ತುoಬ  ಜನ ಗೊತ್ತಿತ್ತು ಏನೇನೋ ಮಾತಾಡ್ತಿದ್ಲು ..ನಾನು ಮನಸ್ಸಿನಲ್ಲೇ ಇವರ್ಯಾರು ನಮ್ ಬ್ರಾಂಚ್ ಆಗೋದು ಬೇಡ ಅನ್ಕೊತ್ತಿದ್ದೆ :D . ಫಸ್ಟ್ ದಿನ,ಸೆಕೆಂಡ್ ದಿನ, ಮದ್ಯ ಮದ್ಯ ಇಂಟರ್ನಲ್ಸ್ exams   ಹೀಗೆ ಮುಗಿದೋಯ್ತು ೧ ವರ್ಷ. ಊಟನು ಕಾಲೇಜ್ ಅಲ್ಲಿ ಕೊಡ್ತಿದ್ರಿಂದ ಬೆಳಗ್ಗೆ ಅಮ್ಮ ನಿಗೆ ತಿಂಡಿ ಮಾಡ್ಕೊದೋ ಕೆಲಸ  ಇರ್ಲಿಲ್ಲ .
೨ ನೆ ವರ್ಷ  ನಾವಿಬ್ರೇ ಇರ್ತಿದ್ವಿ ಅಸ್ಟೇನು ಚನಾಗಿರ್ಲಿಲ್ಲ ಕಾಲೇಜ್ ಅಂದ್ರೆ ಬೋರ್ ಆಗ್ತಿತ್ತು .maths lecturer  ಬೇರೆ ಸ್ಟ್ರಿಕ್ಟ್ ಇದಿದ್ರಿಂದ ಕಾಲೇಜ್ ಗೆ bunk  ಮಾಡೋ ಹಾಗು ಇರ್ಲಿಲ್ಲ .ಕಾಲೇಜ್ ಗೆ ಹೋಗಿಲ್ಲ ಅಂದ್ರೆ imposition ಬರಿಬೇಕಿತ್ತು ಚಿಕ್ ಮಕ್ಳು ತರ . ಒಂದು ದಿನ ಕಾಲೇಜ್ ಡೇ time ಅಲ್ಲಿ bunk ಮಾಡ್ಬೇಕಿದ್ರೆ ಯಾವ್ದೋ ಬಾಯ್ಸ್ mike ಅಲ್ಲಿ ಬೇರೆ ಹೆಸರು ಕೂಗಿ ಕರ್ದಿದ್ರು :p .... ಹುಂ ಹೀಗೆ  ೨ನೆ  ವರ್ಷ  ಕೂಡ ಮುಗಿತು .
೩ನೆ ವರ್ಷ ದಿಂದ  ಕಾಲೇಜ್ ಅಂದ್ರೆ ಏನು ಅಂತ ಗೊತಾಗೋಕೆ  ಶುರು  ಆಗಿದ್ದು. ನಮ್ಮಿಬ್ಬರ  ಜೊತೆ  ಇನ್ನು  ೪ ಜನ ಬಂದ್ರು ..ಮೆಹೆಂದಿ ಹಾಕೊಂಡು ಕುಶಿ ಪಟ್ವಿ .. 

ಕ್ಲಾಸ್ ನವ್ರೆಲ್ಲ seri ಕೊಡಚಾದ್ರಿ ಟ್ರಿಪ್ ಹೋದ್ವಿ . ನಮ್ ನಮ್ಮಲ್ಲೇ ಲವ್ ಲೆಟರ್ ಬರ್ಕೊತಿದ್ವಿ.ಒಬ್ರನ್ನ ಒಬ್ರು ರೆಗಿಸ್ಕೊಂದು ಚನಾಗಿ ಕಾಲ ಕಳೆದ್ವಿ ..ಕೆಲವು hudgir ಜೊತೆ ಶ್ರೀರಂಗ ಪಟ್ನ ಹೋಗಿದ್ವಿ  ..birthday ಪಾರ್ಟಿ ಆಚರಿಸಿದ್ವಿ.

ತುಂಬಾನೇ ಎಂಜಾಯ್ ಮಾಡಿದ್ವಿ ...ಇಂಟರ್ನಲ್ಸ್ ಅಲ್ಲಿ ಕಾಪಿ ಹೋಡುದ್ವಿ...ಲ್ಯಾಬ್ exam ಅಲ್ಲಿ ಕಷ್ಟ ಪಟ್ವಿ  output ಬರ್ಸೋಕೆ ...ಯಾವಾಗ ೪ನೆ ವರ್ಷ ಬರುತ್ತೋ ಅನ್ಸೋಕೆ ಸ್ಟಾರ್ಟ್  ಆಯ್ತು .ಹುಂ ೩ನೆ  ವರ್ಷ  ಮುಗಿತು.
 ೪ನೆ ವರ್ಷ ೭ಥ್ ಸೆಂ ಇನ್ನೊಂದೇ ಸೆಂ ಅನ್ನೋ ಕುಶಿಲೆ ಅದೇನೋ ಹೇಗೋ ಕಳೀತು ..೮ನೆ ಸೆಂ starting ಇಂದಾನೆ ಬೇಜಾರು ಎಲ್ಲರನ್ನು ಮಿಸ್ ಮಡ್ಕೋತಿವಲ್ಲ ಅನ್ನೋ dukka ಎಲ್ಲಾ ದಿನಾನು ಎಂಜಾಯ್ ಮಾಡಿದ್ವಿ .. ಈಸಲಿನು ಟ್ರಿಪ್ ಮುಳ್ಳಯ್ಯನ್ ಗಿರಿ ಬೆಟ್ಟ ಮತ್ತೆ ಹಬ್ಬೆ ಫಾಲ್ಸ್ ಗೆ ಹೋಗಿದ್ವಿ .. ಸಿಕಪಟೆ ಚನಾಗಿತ್ತು ...
 
ಯಾವ ವರ್ಷನು ಕಾಲೇಜ್ ಡೇ ಗೆ ಹೋಗದೆ ಇರೋರು ಈ ಸಲ ಫುಲ್ ಮುಗಿಯೋ ತನಕ ಇದ್ವಿ.saree ಡೇ ಮಾಡಿದ್ವಿ ..ರೋಜ್ ಡೇ ಮಾಡಿದ್ವಿ  .ಅಬ್ಬ ಈ ೪ ವರ್ಷದಲ್ಲಿ ಅದೆಸ್ಟು ಫೋಟೋ ತೆಗ್ಸ್ಕೊಂಡಿದ್ದು , ಅದೆಷ್ಟು ಆಟ ಆಡಿದ್ದು ಮರೆಯೋಕಾಗಲ್ಲ .ಈಗ autograph ಬರೆಸೋ  ಭರಾಟೆ ನಡೀತಿದೆ ..ಈ sendoff ಅನ್ನೋದು ಯಾಕೆ ಮಾಡ್ತಾರೋ ಏನೋ ತುಂಬಾನೇ ಮನಸಿಗೆ ಕಿರಿಕಿರಿ ಆಗತ್ತೆ ..ನಮ್ಮವರನ್ನೆಲ್ಲ ಕಳ್ಕೊತಿದಿವೇನೋ ಅನ್ಸತ್ತೆ ..ಫ್ರೆಂಡ್ಸ್ ಹೇಳ್ತಾರೆ ಎಲ್ಲ ಒಟ್ಟಿಗೆ ಇದ್ಬಿಡನ ಅಂತ ಅದೆಲ್ಲ ಅಗೋ ಮಾತಾ?.ಏನೋ ಮನಸ್ಸಿನ ನೆಮ್ಮದಿಗೆ ಹೇಳ್ಕೋಬೇಕು .. ಹುಂ ಇದೆ sendoff  ನಾಡಿದ್ದು ಮಂಗಳವಾರ ಇದೆ. ನೆನೆಸಿಕೊಂಡರೆ ಅಳು ಬರತ್ತೆ . ಮಿಸ್ you ಆಲ್ ..