Monday, February 13, 2012

ಆ ಹುಡುಗ!!

ಅವಳಾಗ ಬಿ ಎಸ್ ಸಿ ೧ ನೇ ವರ್ಷ. ಕಾಲೇಜ್ ಗೆ ಅಪ್ಪನೇ ಬೆಳಗ್ಗೆ ಕಾರ್ ಅಲ್ಲಿ ಬಿಡಬೇಕಿತ್ತು .(ಕಾರಣ ಅಪ್ಪ ಅಮ್ಮನ ಮೇಲೆ ಕೋಪ.ಕೋಪ ಕ್ಕೆ ಕಾರಣ ಬೇರೇನೋ ಆದರು ತೋರಿಸಿಕೊಳ್ಳೋದು ಇವರ ಮೇಲೆ )ಸಂಜೆ ಬಸ್ ಗೆ ವಾಪಸ್ ಬರೋದು ರೂಢಿ.
ಒಂದು ದಿನ ಅಪ್ಪನಿಗೆ ಬೇರೆಲ್ಲೋ ಹೋಗಬೇಕಿದ್ದ ಕಾರಣ ಬಸ್ ಗೆ ಹೋಗೋ ಹಾಗಾಗಿತ್ತವಳಿಗೆ.. ಕಾಲೇಜ್ ಗೆ ಹತ್ತಿರ ಹೋಗೋ ಬಸ್ ಕಮ್ಮಿ ಇದ್ದಿದ್ರಿಂದ ಅದಕ್ಕೆ ಕಾದರೆ ಕಾಲೇಜ್ ಗೆ ಹೋಗೋಕೆ ಲೇಟ್ ಆಗುತ್ತೇನೋ ಎಂದು ಮತ್ತೊಂದು ಬಸ್ ಹತ್ತಿದ್ದಳು..ಇದು ನಿಲ್ಲಿಸುವ ಜಾಗದಿಂದ ೧ ಕಿ. ಮಿ. ನಡೆಯಬೇಕಿತ್ತು ಕಾಲೇಜ್ ಗೆ.
ಅವಳು ಇಳಿಯುವುದಕ್ಕೆ ಮುಂಚೆ ಇಳಿದ ಆ ಹುಡುಗ ಸ್ವಲ್ಪ ಜೋರಾಗೆ ಅವಳು ಹೋಗೋ ದಾರಿಯಲ್ಲೇ ಹೋಗುತ್ತಿದ್ದ.. ಅವಳು ಸುಮ್ಮನೆ ಅವನ ಹೆಜ್ಜೆಯನ್ನೇ ಗಮನಿಸುತ್ತ ನಿಧಾನವಾಗಿ  ಸಾಗುತ್ತಿದ್ದಳು. ಇನ್ನು ಅರ್ದ ದಾರಿ ಕ್ರಮಿಸಿರಲಿಲ್ಲ ಅವನ ಹೆಜ್ಜೆಗಳ ನಡಿಗೆ ಸ್ವಲ್ಪ ನಿಧಾನವಾಗಿತ್ತು..ಅವಳು ಇನ್ನು ನಿಧಾನಕ್ಕೆ ನಡೆಯಲು ಶುರು ಮಾಡಿದ್ಲು...ಎಷ್ಟೋತ್ತು ಅಂತ ಇಷ್ಟು ನಿಧಾನ ನಡೆಯೋದು...ಅವನನ್ನು ಧಾಟಿ ಮುಂದೆ ಹೋಗಿಬಿಡೋಣ ಎನಿಸಿ ಸ್ವಲ್ಪ ಜೋರಾಗಿ ನಡೆಯೋಕೆ ಶುರು ಮಾಡಿದ್ಲು..ಇನ್ನೇನು ಅವನ ಹತ್ತಿರ ಬಂದಳು ಅನ್ನೋವಾಗ
ಅವನು  ತಿರುಗಿ  ನಿಮ್ಮ ಹೆಸರೇನು ಕೇಳಿದ್ದ. 
ಅಪರಿಚಿತರೊಂದಿಗೆ ನಮ್ಮ ಬಗ್ಗೆ   ಹೇಳಿಕೊಳ್ಳಬಾರದೆಂದು  ಗೊತ್ತಿದ್ದರು ತಿರುಗಿ ಅವಳ ಹೆಸರು ಹೇಳಿದ್ದಳು ಆ ಹುಡುಗಿ...
ನಿಮ್ಮನ್ನು ತುಂಬಾ ಸಲ ನೋಡಿದ್ದೇನೆ ಸಂಜೆ ಹೊತ್ತಿನಲ್ಲಿ..
ಒಹ್! ಹೌದಾ! ಯಾವಾಗ? ಎಲ್ಲಿ? ನಾನೆಲ್ಲೂ ನಿಮ್ಮನ್ನ ನೋಡಿದ ನೆನಪಿಲ್ಲ..
ಅದೇ ಯಾವುದೋ ಹುಡುಗಿ,ಹುಡುಗನ ಜೊತೆ ಮಾತನಾಡುತ್ತಿರುತ್ತೀರಲ್ಲ  ಆ ಮನೆ ಎದುರು ಅಲ್ಲಿ
ಹನ್ ಕಂಪ್ಯೂಟರ್ ಕ್ಲಾಸ್ ಗೆ ಹೋಗ್ತಿದ್ದೀನಿ ಅದು ಮುಗಿದಾದ ಮೇಲೆ ಸ್ವಲ್ಪ ಮಾತಾಡಿ ಬರೋದು ಫ್ರೆಂಡ್ಸ್ ಜೊತೆ
ನೀವೇನ್ ಮಾಡುತ್ತಿರೋದು
ಡಿಪ್ಲೋಮಾ ,ಜೆ ಎಸ್ ಎಸ್ ಕಾಲೇಜ್ ನಲ್ಲಿ, ೧ ಸ್ಟ್ ಇಯರ್ 
ಕಾಲೇಜ್ ಟೈಮಿ೦ಗ್ಸ್  ಏನು ?
ಬೆಳಗ್ಗೆ ೯ ಟು ೫:೩೦ ಲ್ಯಾಬ್ ಇದ್ದಾಗ ..ಇಲ್ಲ ಎಂದರೆ ೧:೩೦   
ಅವಳ್ಯಾಕೆ ಅಷ್ಟೊಂದು ಹೇಳಿಕೊಳ್ಳುತ್ತಿದ್ದಾಳೆ ಅವಳಿಗೆ ತಿಳಿಯುತ್ತಿಲ್ಲ. ಆದರು ೧ ಕಿ. ಮೀ. ಒಬ್ಬಳೇ ಹೋಗೋದು ತಪ್ಪಿತ್ತು ಎಂಬ ಕುಶಿ ಇರಬಹುದು ಅಥವಾ ತನಗಿಂತ ಚಿಕ್ಕವನೆಂದೋ
ಇನ್ನೇನು ಕಾಲೇಜ್ ಬಂತು ಎನ್ನುವಷ್ಟರಲ್ಲಿ
 ಯಾವ್ ಕಾಲೇಜ್ ಅಂತ ಕೇಳಿದ್ದ ಅವನು
ಇದೇ ಅಂತ ಹೇಳಿ ರೋಡ್ ಕ್ರಾಸ್ ಮಾಡೋವಾಗ ಗಾಡಿ ಬಂದಿದ್ದರಿಂದ ಸ್ವಲ್ಪ ಸರಿದು ಅಲ್ಲೇ ನಿಂತಳು
ಇದೇ  ಸಮಯ ಅಂದ್ಕೊಂಡ ಅವನು ಸಂಜೆ ಎಷ್ಟೋತ್ತಿಗೆ ಸಿಗ್ತಿಯ  ಎಂದಿದ್ದ 
ಆ ! ನಾನ್ಯಾಕೆ ನಿಂಗೆ  ಸಿಗಬೇಕು?
ನಾನು ನಿನ್ನ ಲವ್ ಮಾಡ್ತಿದೀನಿ..
ತಲೆ ಗಿಲೆ ಸರಿ ಇದ್ಯ ನಿಂಗೆ ಲವ್ ಅಂತೆ ಹೇಳಿ, ಅವನು ಹೆಸರು ಹಿಡಿದು ಕರೆಯೋದು ಕೇಳಿದರು ಬೇಗ ಬೇಗನೆ ಕಾಲೇಜ್ ಕಾಂಪೌಂಡ್ ಅಲ್ಲಿ ಮರೆಯಾಗಿದ್ಲು ..ಕ್ಲಾಸ್ ಅಲ್ಲಿ ಪಾಠ ಕೇಳಲು  ಆಗುತ್ತಿಲ್ಲ. ಕೈ  ಕಾಲೆಲ್ಲ  ನಡುಗುತ್ತಿದೆ ಹೇಳಿಕೊಳ್ಳಲು  ಯಾರೊಬ್ಬರು ಫ್ರೆಂಡ್ಸ್ ಇಲ್ಲ ಆ ಡಬ್ಬ ಕಾಲೇಜ್ ಅಲ್ಲಿ ..ಮಧ್ಯಾಹ್ನವೆ ಕ್ಲಾಸ್ ಮುಗಿದಿತ್ತವತ್ತು..ಬೇಗ ಬೇಗನೆ ಬಸ್ ಹತ್ತಿ ಮನೆಗೆ ಹೋಗಿದ್ದಳು ..ಮನೆಗೆ ಹೊದೊಳೆ ಬೆಳಗ್ಗಿಂದ ಸಂಜೆ ವರೆಗೆ ನಡೆದಿದ್ದು ಎಲ್ಲದನ್ನು ಹೇಳೋಳಿಗೆ ಇವತ್ತು ನಡೆದಿದ್ದನ್ನು ಹೇಳುವ ಆತುರ ...
ಅಮ್ಮ ಇವತ್ತು ಅಬ್ಬವ್ನು ನಾನು ಹೋಗೋ  ಬಸ್ ಗೆ ಬಂದು ಮಾತಾಡ್ಸಿ ನಾನಿನ್ನ ಲವ್ ಮಾಡ್ತಿದೀನಿ ಅಂದ ...
ಹೌದ ನಿನ್ ಯಾಕೆ ಮತಾಡೋಕೆ ಹೋದೆ. ನೋಡು ಇನ್ನೊಂದಿನ ಹೀಗೆ ಏನಾದ್ರೂ ಮತ್ತೆ ಕಾಟ ಕೊಟ್ರೆ ಏನಾದ್ರು ಮಾಡೋಣ
ಅಮ್ಮ ನನ್ಕಿಂತ ಚಿಕ್ಕೋನು ಅವ್ನು ಬಿಡು ಏನಾಗಲ್ಲ .
ಮರ್ದಿನ ಮತ್ತೆ ಅಪ್ಪ ಬೆಳಗ್ಗೆ ಕಾಲೇಜ್ ಗೆ ಬಿಟ್ಟಿದ್ದಾಯ್ತು ... ಸಂಜೆ ಬಸ್ಸಿಳ್ದು ೧೦ನಿಮಿಷ ನಡೆಯಬೇಕು ಅವಳ ಮನೆಗೆ..ನಡೆದು ಬರುತ್ತಿದ್ದಾಳೆ ಹಿಂದಿನಿಂದ ಇವಳ ಹೆಸರನ್ನೇ ಕೂಗುತ್ತ ಹಿಂದಿನಿಂದ ಯಾರೋ ಬಂದಂತಾಗಿ ಹಿಂದೆ ತಿರುಗಿ ನೋಡಿದ್ರೆ ಮತ್ತೆ ಅದೇ ಮಹಾಶಯ ..
ನಾನು ನಿನ್ನನ್ನ ತುಂಬಾ ಇಷ್ಟ ಪಡ್ತಿದೀನಿ ಪ್ಲೀಸ್ ಒಪ್ಕೋ...
ಯಾರನ್ನ ?ಏನು ?ಯಾರು ನೀನು ? ..ನಾನೇನು ೧ ಪಿ ಯು ಹುಡುಗಿ ಅಲ್ಲ (ಆ ಕಾಲೇಜ್ ಅಲ್ಲಿ ಪಿ ಯು ಇಂದ ಡಿಗ್ರಿ ವರೆಗೂ ಇತ್ತು .. ಅವನು ಅವಳಿನ್ನು ಪಿ ಯು ಎಂದುಕೊಂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು ) ಬಿ ಎಸ್ ಸಿ ಓದ್ತಿರೋದು ಆ ಕಾಲೇಜ್ ಅಲ್ಲಿ...ಅವನ ಕಂಗಳು ಇಷ್ಟ ಗಲ ಆಗಿದ್ದು ಸ್ಪಷ್ಟ ವಾಗಿ ಕಾಣುತ್ತಿತ್ತು .. ಸುಮ್ಮನೆ ವಾಪಾಸ್  ಹೋಗಿದ್ದ ಏನು ಹೇಳಬೇಕೆಂದು ತಿಳಿಯದೆ  
ಅಬ್ಬ ಇನ್ನು ಬರುವುದಿಲ್ಲವೆಂದು ತಿಳಿದು  ಮನೆಗೆ ಹೋಗಿದ್ದಳವಳು
ಮನೆಯಲ್ಲಿ ಅಮ್ಮ ಇವತ್ತು ಏನಾಯ್ತು ..ಏನಿಲ್ಲ ಬಿಡು ...ಯಾಕೋ ಅಮ್ಮನು ಮಾತಾಡದೆ ಸುಮ್ಮನಾಗಿದ್ದಳು
ಮತ್ತೆ ಮರುದಿನ ಮನೆಗೆ ವಾಪಾಸ್ ಬರುವಾಗ ಓಡಿ ಬಂದಿದ್ದ
 ನಿಮ್ಮತ್ರ ಮಾತಾಡ್ಬೇಕು..
ಅವಳು ಏನು ಕೇಳದಂತೆ ಸುಮ್ಮನೆ ಹೋಗುತ್ತಿದ್ದಳು
ಪ್ಲೀಸ್ ೨ ನಿಮಿಷ ನಿಲ್ಲಿ 
ಏನು ??ನನಗೆ ನಿನ್ನ ಹತ್ತಿರ ಮಾತಾಡೋಕೆ ಇಷ್ಟ ಇಲ್ಲ
ಸ್ವಲ್ಪ ಸಣ್ಣಗೆ ಮಾತಾಡಿ ಪ್ಲೀಸ್  
ಅವಳ ದ್ವನಿ ಅಷ್ಟರಲ್ಲೇ ೪ ಮನೆಗೆ ಕೇಳುವಷ್ಟು ಜೋರಾಗಿತ್ತು ..ಆದರೆ ಪಕ್ಕದಲ್ಲಿ ಯಾವುದೇ ಮನೆ ಇಲ್ಲದೆ ಬಟಾ ಬಯಲಾಗಿದ್ರಿಂದ ಯಾರಿಗೂ ಕೇಳಿಸಿರಲಿಲ್ಲ 
ನಾನು ಡಿಪ್ಲೋಮಾ ಫಸ್ಟ್ ಇಯರ್ ಓದಿ  ಮುಗಿಸೋಕಾಗ್ದೆ  ೨ ವರ್ಷ ಕೆಲಸ ಮಾಡ್ತಿದ್ದೆ ಇವಾಗ ಮತ್ತೆ ಓದ್ತಾ ಇದ್ದೀನಿ ..
ಇದನ್ನ ನಿನ್ನೇನೆ ಹೇಳ್ಬೋದಿತ್ತಲ್ಲ .. ನಿನ್ನೆ ನಿನ್ನ ಫ್ರೆಂಡ್ಸ್ ಈ ವಿಷಯಾ ಹೇಳ್ಕೊಟ್ಟಿರಲಿಲ್ವ ಅತ್ವ ಗಟ್ಟಿ ಹಾಕಿದ್ದು ಮರ್ತೊಗಿತ್ತ...ಡಿಪ್ಲೋಮಾ ಸರಿಯಾಗಿ ಮುಗಿಸೋಕೆ ಬಂದಿಲ್ಲ ಈಗ ಲವ್ ಬೇರೆ . ನಿನ್ನ ಫ್ಯೂಚರ್ ಬಗ್ಗೆ ಯೋಚನೆಯೇ ಇಲ್ಲ ನಿನಗೆ..ಏನು ನನ್ನ ಲೈಫ್ ಅನ್ನು ಹಾಳು ಮಾಡಬೇಕು ಅಂದ್ಕೊಂಡಿದೀಯ ..ಇನ್ನು ಏನೇನೋ ಹೇಳುತ್ತಾ ಮುಂದೆ ಹೋದಳು
ಅವನು ಅವನ ದಾರಿಯಲ್ಲಿ ವಾಪಾಸ್ಸ್ ಹೋಗುತ್ತಿದ್ದ
ಮನೆಗೆ ಬಂದ ನಂತರ ಅಮ್ಮನದ್ದು ಮತ್ತೆ ಅದೇ ಪ್ರಶ್ನೆ ಇವತ್ತೇನಾಯ್ತು
ಏನಿಲ್ಲ ಬಿಡು ಅವನಿನ್ನೂ ಬರೋದಿಲ್ಲ ನನಗೆ ಗೊತ್ತಿಲ್ಲದಂತೆ ೪ ಮನೆಗೆ ಕೇಳೋಹಾಗೆ ಬೈದು ಕಳಿಸ್ದೆ ..
ಇದಾಗಿ ೫ ವರ್ಷ ಆಗಿದೆ ಮೊನ್ನೆ ಅದೇ ಹುಡುಗ ಆ ಗೂಡಂಗಡಿ ಯಲ್ಲಿ ಬೀಡಿ ಸೇದುತ್ತ ನಿಂತಿದ್ದನ್ನು ನೋಡಿ ಇವನನ್ನ ಲವ್ ಮಾಡಿದ್ರೆ ನಾನು ಅವನ ಪಕ್ಕ ನಿಂತು ಸಿಗರೇಟ್ ಸೇದ್ಬೇಕಿತ್ತು ಎಂದುಕೊಂಡು ನೋಡಿಯು ನೋಡದಂತೆ ಅವನಿಂದ ಮರೆಯಾದಳು ...