Friday, March 30, 2012

ಬೇಸಿಗೆಯಲ್ಲಿ ಕೂಲ್ ಕೂಲ್

 ಸಾಮಾಗ್ರಿಗಳು -
ಹಾಲು -೧ ಲೋಟ 
ಕಸ್ಟರ್ಡ್ ಪೌಡರ್ (ವೆನಿಲ್ಲಾ)-೪ ಚಮಚ
ಎಸೆನ್ಸೆ (ವೆನಿಲ್ಲಾ )-೨ ಚಮಚ
ಸಕ್ಕರೆ-೭ಚಮಚ 
ಉಪ್ಪು -೧ ಚಿಟಿಕೆ
ವಿಪ್ಡ್ ಕ್ರೀಂ - [ಹಾಲು (೧ ಲೋಟ ) -ಮೈದಾ ಹಿಟ್ಟು (೧ ಚಮಚ )-ಸಕ್ಕರೆ (೨ ಚಮಚ )-ವೆನಿಲ್ಲಾ ಎಸೆನ್ಸೆ  (೧/೨ಚಮಚ)- ಉಪ್ಪು (೧ ಚಿಟಿಕೆ)
                   -  ಮೈದಾ ಹಿಟ್ಟು ,ಸಕ್ಕರೆ, ಉಪ್ಪನ್ನು ತಣ್ಣನೆಯ ೧/೨ ಕಪ್ ಹಾಲಿಗೆ ಹಾಕಿ ಕರಡಿಕೊಳ್ಳಿ
                   - ಉಳಿದ ೧/೨ ಕಪ್ ಹಾಲನ್ನು ಬಿಸಿ ಮಾಡಿ ಕರಡಿದ ಮಿಶ್ರಣವನ್ನು ಬಿಸಿ ಹಾಲಿಗೆ ಹಾಕಿ ದಪ್ಪ ಆಗುವರೆಗೆ           
ತೊಳೆಸಿ .   ನಂತರ ತಣಿಯಲು ಬಿಡಿ .ತಣಿದ ನಂತರ ವೆನಿಲ್ಲಾ ಎಸೆನ್ಸೆ ಹಾಕಿ  ]
                                                        

 ಮಾಡೋ ವಿಧಾನ -
-೧/೨ ಕಪ್ ಹಾಲನ್ನು   ಬಿಸಿ ಮಾಡಿ,ಸಣ್ಣ ಬೆಂಕಿ ಮಾಡಿ
-ಕಸ್ಟರ್ಡ್ ಪೌಡರ್ ಅನ್ನು ೧/೨ ಕಪ್ ತಣ್ಣನೆಯ ಹಾಲಿನೊಂದಿಗೆ ಕರಡಿಕೊಂಡು  ಬಿಸಿಯಾದ ಮಿಶ್ರಣಕ್ಕೆ ಹಾಕಿ ಗಟ್ಟಿಯಾಗುವವರೆಗೆ ಕರಡಿ ತಣಿಯಲು ಬಿಡಿ 
 - ವಿಪ್ಡ್ ಕ್ರೀಂ,ಉಪ್ಪು,ಸಕ್ಕರೆ ,ಎಸೆನ್ಸೆ ಅನ್ನು  ಮೇಲಿನ ಮಿಶ್ರಣಕ್ಕೆ ಹಾಕಿ.
-ಮಿಕ್ಸಿ ಗೆ ಹಾಕಿ 10 ನಿಮಿಷದ  ತನಕ ರುಬ್ಬಿ-ನಂತರ ಗೋಡಂಬಿ ,ದ್ರಾಕ್ಷಿ ಯನ್ನು ಮಿಕ್ಸ್  ಮಾಡಿ ಅಗಲವಾದ ಪಾತ್ರೆಗೆ ಹಾಕಿ ಫ್ರಿಜರ್ ನಲ್ಲಿ ೭ ಗಂಟೆ  ಕಾಲ ಇಟ್ಟರೆ ಐಸ್ ಕ್ರೀಮ್ ರೆಡಿ

Thursday, March 22, 2012

ಮಂಗ..

ಮೈಸೂರ್ ಗೆ ಬಂದ ಹೊಸತು. ಮಂಗಗಳೆಂದರೆ ನಮ್ಮ ಉರಿನಲ್ಲಿ ಹಿಡಿ ಹಿಡಿ ಅಂದ ತಕ್ಷಣ ಓಡಿಹೋಗೋದನ್ನ ನೋಡಿದ್ದೆ . ಅದರ ಕಿತಾಪತಿ ತಾಳಲಾರದೆ ಹಿಡಿಸಿ ದೂರದ ಕಾಡಿಗೆ ಬಿಟ್ಟು ಬರ್ತಿದ್ರು.ಆದರು  ಒಂದ್ ೧೫ ದಿನಕ್ಕೆಲ್ಲ ಮತ್ತೆ ಅಷ್ಟೇ ಮಂಗಗಳು ಹಾಜರಿ ಹಾಕ್ತಿದ್ವು.ಕೆಲವೊಂದು ಸಲ ಸಿಗದೇ ಮರದ ಮೂಲೆಯಲ್ಲಿ ಅಡಗಿ ಕುಳಿತಿದ್ರೆ ಬಂದೂಕಿನಿಂದ ಹೊಡಿತಿದ್ರು.ಆಗ ಅದು ಕೈ ಮುಗಿದುಕೊಂಡು ಕೆಳಕ್ಕೆ ಬೀಳೋದನ್ನ ನೋಡಿದ್ರೆ ಪಾಪ ಅನಿಸೋದು.(ಯಾಕೆ ಸಾಯೋವಾಗ ಕೈ ಮುಗಿಯುತ್ತೆ ಅನ್ನೋದು ಇನ್ನು ಗೊತ್ತಿಲ್ಲ).. 
ಈ ಮೈಸೂರ್ ನಲ್ಲಿ ಬಂದ  ೪ ದಿನಕ್ಕೆ ಮಂಗದ ಪರಿಚಯವಾಗಿತ್ತು . ಕೆಳಗಡೆ ಅಕ್ಕನ ಮನೆಗೆ ದಿನಾ ಹೋಗ್ತಿದ್ದೆ..ಹಾಗೆ ಅವತ್ತು ಹೋದಾಗ ಅಕ್ಕ ಅಡುಗೆ ಮನೆಯಲ್ಲಿ ಯರತ್ರಾನೋ ಚಿಕ್ಕ ಮಕ್ಕಳನ್ನು ಮಾತನಾಡಿಸುವ ಹಾಗೆ ಮಾತನಾಡ್ತಿದ್ರು.. ಸುಮ್ಮನೆ ಹೊರಗಡೆ ಕುಳಿತಿದ್ದೆ. ಅವರ ಗಂಡ ಬಂದೋರೆ ಅಕ್ಕ ಯಾರತ್ರ ಮಾತಾಡ್ತಿದಾಳೆ ಕೇಳಿದ್ರು .ಏನೋ ಗೊತ್ತಿಲ್ಲ ಎದರು ಮನೆ ಆಂಟಿ ಹತ್ರ ಇರ್ಬೋದು ಅಂದೆ.ಒಳಗ್ ಹೋಗಿ ನೋಡ್ಕೋ ಬಾ ಅಂದ್ರು . ಹೋಗ್ ನೋಡ್ತೀನಿ ಒಂದು ಕೈಲಿ ತೊಗರಿ  ಬೇಳೆ ಹಿಡ್ಕೊಂಡಿದಾರೆ .ಎದುರು ಗಡೆ ಕಿಟಕಿ ಇಂದ ಮಂಗ ಇವರ ಕೈ ಹಿಡ್ಕೊಂಡು ಆ ತೊಗರಿ ಬೀಳೆ ತಿಂತಾ ಇತ್ತು .. ಯಪ್ಪೋ !!


ಅಲ್ಲಿಂದ ಸೀದಾ ಮನೆಗೆ ಓಡಿ ಬಂದೆ. ಮುಷ್ಟಿ ತುಂಬಾ ಹೆಸರು ಬೇಳೆ ತಗೊಂಡು  ಕಿಟಕಿ ಹತ್ರ ನಿತ್ಕೊಂಡು ಕಾಯ್ತಿದ್ದೆ .ಬರ್ಲಿಲ್ಲ .ಮರ್ದಿನ ಕಿಟಕಿ ಕೆಳಗಡೆ ಎಲ್ಲ ಸ್ವಲ್ಪ ಹರಡಿ ಕಿಟಕಿ ಇಂದ ನೋಡ್ತಾ ಇದ್ದೆ ಒಂದು ಮರಿ ಮಂಗ ಬಂತು .ಕೈ ಚಾಚಿದೆ . ನಾನು ಕೈ ತೆಗೆದು ಕೊಳ್ಳಬಾರದೆಂದು ಚಂದ ಮಾಡಿ ನನ್ನ ಕೈ ಅನ್ನು ಒಂದು ಕೈಲಿ ಹಿಡ್ಕೊಂಡು ಮತ್ತೊಂದು ಕೈ ಲಿ ಆ ಬೇಳೆ ತೆಗೆದು ಕೊಂಡು ತಿನ್ನೋಕೆ ಸ್ಟಾರ್ಟ್ ಮಾಡ್ತು . ಹೀಗೆ ಅಬ್ಯಾಸ ವಾಗಿ ಬಿಟ್ಟಿತ್ತು ದಿನಾ ೧೧ ಗಂಟೆಗೆ ಬಂದ್ಬಿಡೋದು ಕಿಟಕಿ ಹತ್ರ.ಬಟ್ಟೆ ನೆತಾಕೋ ಹಗ್ಗದ ಮೇಲೆ ಸುಮಾರು ಸರ್ಕಸ್ ಮಾಡಿ ನಗಿಸ್ತಿತ್ತು .ಒಂದು ದಿನ ಇಸ್ಟೊಂದು ಕ್ಲೋಸ್ ಆಗಿದೆ ಹತ್ತಿರ ಹೋಗಿ ಮುಟ್ಟೋಣ ಅಂತ ಹೋದರೆ ಅದರ ಅಮ್ಮ ಬಂದು ಹೆದರಿಸಿ ಕೈಯಲ್ಲಿದ್ದ  ಬೇಳೆ ಯನ್ನೆಲ್ಲ ಅಲ್ಲೇ ಬಿಟ್ಟು ಓಡುವ ಹಾಗೆ ಮಾಡಿತ್ತು.
 ಕೈಯಲ್ಲಿ ಕೋಲು ಇಲ್ಲದಿದ್ದರೆ ಹೊರಗಡೆ ಹೋಗೋಕೆ ಆಗೋಲ್ಲ ಅಷ್ಟು ಹೆದರಿಸುತ್ತೆ ಸಿಟಿ ಮಂಗಗಳು.ಪಾಪ ಅವಾದ್ರು ಏನ್ ಮಾಡತ್ತೆ ತಿನ್ನೋಕೆ ಹಣ್ಣಿನ ಮರಗಳಿಲ್ಲ ,ವಾಸಿಸೋಕೆ ಕಾಡುಗಳಿಲ್ಲ.ಈ ಸಿಟಿ ನಲ್ಲಿ ಏನು ಸಿಗಲ್ಲ ಹಾಗಾಗಿ ಹೆದರಿಸುವ ತಂತ್ರ ಮಾಡಿರ್ಬೋದು. ಮನೆಯ ಬಾಗಿಲು ತೆಗೆದು ಒಳಗಡೆ ಏನಾದ್ರೂ ಮಾಡ್ತಿದ್ರೆ ಒಳ್ಳೆ ನೆಂಟರು ಬಂದ ಹಾಗೆ ಬಂದು ಅಲ್ಲಿದ್ದ ಪಪ್ಪಾಯ, ಬಾಳೆ ಹಣ್ಣು ಅಷ್ಟು ಕಾಲಿ ಆಗೋವರೆಗೆ ತನ್ನದೇ ಮನೆ ಅನ್ನೋ ತರಾ ಕುಳಿತು ತಿಂದು ಹೋಗುತ್ತೆ .ಅಲ್ಲಿಯ ವರೆಗೆ ನಾವು ಹೊರ ಬರಲು ಹೆದರಬೇಕು...

ಯಾಕೋ ಗೊತ್ತಿಲ್ಲ ಆ ಮರಿ ಮಂಗ ತುಂಬಾನೇ ಇಷ್ಟ ಆಗಿತ್ತು. ದಿನಾ ಅದರ ಹೊಟ್ಟೆ ಸೇವೆ ನಡಿತಿತ್ತು .ಅದು ಬಿಟ್ಟಿ ಮನರಂಜನೆ ಕೊಟ್ಟು ಹೋಗ್ತಿತ್ತು.. ಅದನ್ನ ಹಿಡಿದು ಮನೆಯಲ್ಲೇ ಸಾಕೋಣ ಅಂದ್ಕೊಂಡೆ..ಮರುದಿನ ಒಂದು ಗೋಣಿಚೀಲ ಮತ್ತೆ ಹಗ್ಗ  ರೆಡಿ ಮಾಡ್ಕೊಂಡು ಇಟ್ಕೊಂಡಿದ್ದೆ .ಹಿಡಿಯೋ ತಾಕತ್ತು ನನಗಿಲ್ಲ ಅನ್ನೋದು ತಿಳಿದಿತ್ತು ಅದ್ರು ಟ್ರೈ ಮಾಡೋಕೆನಂತೆ.ಅವತ್ತು ೧೧ ಗಂಟೆಗೆ ರೆಡಿ ಆಗಿ ನೋಡ್ತಿದ್ದೆ ಬಂದೆ ಇಲ್ಲ ಅಸ್ಸಾಮಿ.ಹೀಗೆ ೩,೪ ದಿನ ಅಯ್ತು ಆದರು ನಾಪತ್ತೆ ..ದೀಪಾವಳಿ ಟೈಮ್ ಬೇರೆ. ಸ್ವಲ್ಪ ದಿನ ಆದ್ಮೇಲೆ ಪಕ್ಕದಲ್ಲಿದ್ದ ತೆಂಗಿನ ಮರದ ಮೇಲೆ ಒಂದು ಮಂಗ ಸುಮ್ಮನೆ ಕೂತಿದೆ.ಮುಖ ಮೂತಿ ಬಾಲ ಎಲ್ಲ ಸುಟ್ಟು ಹೋಗಿತ್ತು ಅದು ಹೇಗೆ ಜೀವ ಹಿಡ್ಕೊಂಡ್ ಬಂದು ಇಲ್ಲಿ ಕುತಿತ್ತೋ ಏನೋ  ..ಪಾಪ ಅಂತ ಹತ್ತಿರ ಹೋಗಿ ನೋಡಿದ್ರೆ ಇದೆ ಕಿಲಾಡಿ ಮಂಗ . ಫುಲ್ ಸ್ಮೆಲ್ ಬೇರೆ ಬರ್ತಿತ್ತು.ಅಲ್ಲೇ ನೆಲದ ಮೇಲೆ  ಬೇಳೆ ಹಾಕಿ ಬಂದೆ. ಸ್ವಲ್ಪ ಹೊತ್ತು ಬಿಟ್ಟು ಹೋಗಿ ನೋಡಿದ್ರೆ ಆ ಕಾಳು ಅಲ್ಲೇ ಇತ್ತು ಆ ಮರಿ ಮಂಗನು ಕೊನೆಗೆ ಬರಲೇ ಇಲ್ಲ .

Sunday, March 4, 2012

ಮೋಸ.

ಮಧ್ಯಾಹ್ನ ಊಟ ಮಾಡಿ ಇನ್ನೇನು ಹಾಸಿಗೆ ಕೊಡವಬೇಕೆನ್ನುವಷ್ಟರಲ್ಲಿ ಗೆಳತಿಯ ಫೋನ್ ಬಂತು..೪ ನೇ ಬ್ಲಾಕ್ ಗೆ ಹೋಗಿ ಬರೋಣ ಬಾ.ನನ್ನ ಕೊಲೀಗ್ ಗೆ ಬಸ್ ಪಾಸ್ ಮಾಡಿಸ್ಬೇಕಂತೆ ಅಂದ್ಲು .(( ಆ ಕೊಲೀಗ್ ನಾರ್ಥಿ. ಲಾಸ್ಟ್ ವೀಕ್ ಬಸ್ ಪಾಸು ಮಾಡಿಸುವಲ್ಲಿ ಹೋಗಿ ಕೇಳಿಕೊಂಡು ಬಂದಿದ್ದಾಳೆ ಏನೇನು ಬೇಕು ಎಂದು. ಅವನು ಕನ್ನಡದಲ್ಲಿ ಹೇಳಿದ್ದಾನೆ ಇವಳಿಗೆ ತಲೆ ಬುಡ ಅರ್ಥ ಆಗದೆ ಹಾಗೆ ವಾಪಸ್ ಬಂದಿದ್ದಾಳೆ.ಇವಳ ಹತ್ತಿರ ಬಂದು ನಿನಗೆ ಕನ್ನಡ ಗೊತ್ತಲ್ವ ನನಗೆ ಬಸ್ ಪಾಸು ಮಾಡಿಸ್ಕೊಡು.ಇ ಆಟೋ ದವರ ಹತ್ತಿರನು ಹೀಗೆ ಕಷ್ಟ ಆಗುತ್ತೆ ಏನು ಮಾತಾಡುತ್ತಾರೋ ಒಂದು ತಿಳಿಯಲ್ಲ ಬೇಗ ಕನ್ನಡ ಕಲಿಬೇಕು ಅಂತಿದ್ಲಂತೆ.ನನಗೂ ಹಾಗೆ ಹಿಂದಿ ಮಾತಾಡಿದ್ರೆ ಅರ್ಥ ಆಗಲ್ಲ.ಗೊಲ್ಗಪ್ಪ ತಿನ್ಬೇಕು ಅಂದ್ರೆ ತುಂಬಾ ಕಷ್ಟ :P)) ನಾನು  ಈಗ ರೆಡಿ ಆಗಿ ಬರೋದ್ರೊಳಗೆ ೨೦ ನಿಮಿಷ ಆಗೋಗತ್ತೆ ನೀವ್  ಇಬ್ರೆ ಹೋಗಿ ಬನ್ನಿ ಅಂದೆ .ಏನು ಪರವಾಗಿಲ್ಲ ನನಗೆ  ಶಾಪಿಂಗ್ ಕೂಡ ಇದೆ ನೀನು ಬಾ ಕಾಯ್ತಿವಿ. ಬೇಗ ಬಾ ಸ್ಟಾಪ್ ಗೆ ಅಂದ್ಲು. ಸರಿ ಎಂದು ಯಾವುದೊ ಪ್ಯಾಂಟ್ ಶರ್ಟ್ ಹಾಕಿ ಮುಖ ತೊಳೆದು ಹೊರಟೆ. 
ದಿನ ಒಂದರ ಹಿಂದೆ ಒಂದು ಬರುವ ಬಸ್ ಇವತ್ತು ಒಂದು ಇಲ್ಲ .ಯಾವಾಗ್ಲೂ ನಾವು ಹೊರಟಾಗ ನಾವು ಹೋಗುವಲ್ಲಿಗೆ ಬಸ್ ಬರಲ್ಲ ಬಿಡಿ. ಆಟೋ ದಲ್ಲಿ ಹೊರಟ್ವಿ. ಪಾಸು ಮಾಡಿಸುವಲ್ಲಿ ೩ ಜನ ಇದ್ರು ಅಷ್ಟೆ .ಕ್ಯು ಇರ್ಲಿಲ್ಲ. ಒಬ್ನು ಬಂದು ಇ ನಾರ್ಥಿ ಹತ್ತಿರ ಇಂಗ್ಲಿಷ್ ನಲ್ಲಿ ಬೆಳಗ್ಗೆ ನಾನು ೭೭೫ ಪಾಸ್ ತಗೊಂಡ್ ಹೋಗ್ಬಿಟಿದೀನಿ.ನನಗೆ 550 ದು ಬೇಕಾಗಿತ್ತು .ನಿಮಗೆ ಹೇಗಿದ್ರು ೭೭೫ ದು ಬೇಕಲ್ವ ಇಬ್ರು ಬದಲಾಯಿಸಿಕೊಳ್ಳೋಣ ಅಂದ. ಅವಳಿಗೆ ಅವನು ಏನು ಹೇಳ್ತಿದಾನೆ ಅಂತ ಸರಿಯಾಗಿ  ಅರ್ಥ  ಆಗ್ಲಿಲ್ಲ ಕಷ್ಟ ಪಟ್ಟು ಫುಲ್ ತಿಳಿಸಿದ್ದಾಯ್ತು . ಅವನೇ ಪಾಸ್  ನು ತಂದ್ಕೊಟ್ಟ 550 ಇಸ್ಕೊಂಡು. ಆಮೇಲೆ ಬಂದು ಮೇಡಂ ೨೨೫ ಈಗ ನೀವು ನಂಗೆ ಕೊಡ್ಬೇಕು ಅಂದ.ಇವಳ ಹತ್ತಿರ ಚೇಂಜ್ ಇರ್ಲಿಲ್ಲ ೩೦೦ ಅವನಿಗೆ ಕೊಟ್ಟು ಚೇಂಜ್ ಕೊಡಿ ಅಂದ್ಲು.ಅವ್ನು ನನ್ನ ಹತ್ತಿರವೂ ಚೇಂಜ್ ಇಲ್ಲ ಇರಿ ಯಾರ ಹತ್ತಿರವಾದರು ಇಸ್ಕೊಡ್ತೀನಿ ಅಂತ ಅಲ್ಲೇ ೩ ಜನರನ್ನ ಕೇಳಿದ ಹಾಗೆ ಮಾಡಿದ ಅವ್ರ ಹತ್ತಿರ ಇರ್ಲಿಲ್ಲ ಅಂತ ಪಕ್ಕದ ಆಫೀಸ್ ಲಿ ತಗೋ ಬರ್ತೀನಿ ಅಂತ ಹೇಳಿ ಹೊರಟ.ಇವಳಿಗೆ ಏನು ಎನಿಸಿತೋ ಗೊತ್ತಿಲ್ಲ ಇರಿ ೫೦ ಇದೆ ನಂ ಹತ್ರ ೧೦೦ ವಾಪಾಸ್ ಕೊಡಿ ಅಂತ ತಗೊಂಡ್ಲು..ಇನ್ನು ೨೫ ಚೇಂಜ್ ತಗೋ ಬನ್ನಿ ಅಂತ ಅವನ್ನ ಕಳಿಸಿ ಆಯಿತು..ಫುಲ್ ಪೆದ್ದರಾಗಿದ್ದು ಅಲ್ಲೇ..೩ ಜನರಲ್ಲಿ ಒಬ್ಬರಾದರು ಅವನ ಜೊತೆ ಹೋಗಬೇಕಿತ್ತು..ಆ ಅಸಾಮಿ ಹೊದೊವ್ನು ವಾಪಾಸ್ ಬಂದೆ ಇಲ್ಲ ನಾವು ಅರ್ಧ ಗಂಟೆ ಅಲ್ಲೇ ಕಾದಿದ್ದಾಯ್ತು.ಅವಳಂತೂ ಬೈತಾ ಇದಾಳೆ ಇ banglore  ಲಿ ಯಾರನ್ನು  ನಂಬಲು ಆಗೋಲ್ಲ ಸುಮ್ನೆ ನಾವು ಡೈರೆಕ್ಟ್ ಆಗಿ ಅಲ್ಲೇ ಪಾಸು ತಗೊಬೋದಿತ್ತು ಏನೋ ಭಾರಿ ಗೊತ್ತಿದ್ದವಳ ಹಾಗೆ ಹೇಳಿದೆ ಈಗ ನೋಡು ಅವನು ಬರೋದಿಲ್ಲ ಎಷ್ಟು ಕಾದರು ಅಷ್ಟೆ  .ನಡಿ ಹೋಗೋಣ. ನನಗೆ ಇವತ್ತು ಫುಲ್ ಲಾಸ್ ಅವನು ಏನೋ ಇಂಗ್ಲಿಷ್ ಲಿ ಹೇಳ್ತಿದ್ದ ನೀನು ಮತ್ತೆ  ಕನ್ನಡ ದಲ್ಲಿ ಮಾತನಾಡಿ ನನಗೆ ಏನು ಗೊತ್ತಾಗ್ದೆ ಇರೋ ತಾರಾ ಮಾಡ್ದೆ ಅಂತ ಹೇಳಿದ್ಲು.
ಅವಳನ್ನ ಅವಳ ಏರಿಯ ಬಸ್ ಹತ್ತಿಸಿ ವಾಪಾಸ್ ಬಂದ್ವಿ ನಾವಿಬ್ರು.ನನ್ನ ಫ್ರೆಂಡ್ ಹೇಳಿದ್ಲು ಅವಳು ಸಿಕ್ಕಾಪಟ್ಟೆ ಕರ್ಚು ಮಾಡೋಕೆ ಹಿಂದೆ ಮುಂದೆ ನೋಡ್ತಾಳೆ .ಇನ್ನು ಇದನ್ನೇ ೧ ವೀಕ್ ಹೇಳ್ತಾ ಇರ್ತಾಳೆ ಕನ್ನಡದವರಿಗೆ ಬೈತಾ ಇರ್ತಾಳೆ. ಅವ್ನು ಬಂದು ಕೊಟ್ಟಿದ್ರೆ ಚನಾಗಿತ್ತು ಅಂದ್ಲು . ಅದಕ್ಕೆ ಅಂದೆ ನೀನು ಎಷ್ಟು ಹುಡುಕಿದರು ಅವನು ಬರಲ್ಲ  ಒಂದು ಕೆಲಸ ಮಾಡು ಅವಳಿಗೆ ಈಗಲೇ ಫೋನ್ ಮಾಡಿ ಹೇಳು ನಾವು ನಿನ್ನ ಬಿಟ್ಟು ವಾಪಾಸ್ ಪಾಸ್ ಮಾಡಿಸಿದ ಜಾಗದಿಂದನೆ ಬಂದ್ವಿ .ಅವನು ಅಲ್ಲೇ ಕಾಯ್ತಾ ಇದ್ದ .೨೫ ವಾಪಾಸ್ ಕೊಟ್ಟಿದಾನೆ ಅಂತ ಹೇಳು . ಹೇಗಿದ್ರು ನಿನ್ನ ಫ್ರೆಂಡ್ ಅಲ್ವ ಇಷ್ಟು ಸುಳ್ಳು, ಕರ್ಚು ಮಾಡಿದ್ರೆ ಏನು ಆಗಲ್ಲ ಅಂದೆ..ಅವಳಿಗೂ ಸರಿ ಅನಿಸಿತ್ತು ಎನಿಸುತ್ತೆ ..ತಕ್ಷಣ ಫೋನ್ ಮಾಡಿ ಹೇಳಿದ್ಲು..ಫೋನ್ ಇಟ್ಟ ಸ್ವಲ್ಪ ಹೊತ್ತಿನಲ್ಲೇ ಅವಳ ಫೋನ್ ಬಂತು ಪಾಸ್ ಎಸ್ಟ್ ದಿನ ವ್ಯಾಲಿಡಿಟಿ,ಎಲ್ಲೆಲ್ಲಿಗೆ ಬರತ್ತೆ ಎಲ್ಲ ವಿಚಾರಸಿ ಬಾ.ಇವಳು ಫೋನ್ ಇಟ್ಟು ಹೇಳಿದ್ಲು  ಅಬ್ಬ ಸದ್ಯ ಅವಳ ಮಾತಿನಲ್ಲಿ ಈಗ ಸಮಾಧಾನ ಕಾಣ್ತಾ ಇದೆ ಅಂತ. ಸ್ಮೈಲ್ ಮಾಡಿ ಸುಮ್ಮನಾದೆ ..
ಮೂಡ ನಂಬಿಕೆಯನ್ನು ನಂಬದಿದ್ದರೂ ಮನಸಿನ ಒಂದು ಮೂಲೆಯಲ್ಲಿ ಅನಿಸುತ್ತಿತ್ತು ೩ ಜನ ಹೋಗಿದ್ದಕ್ಕೆ ಹೀಗಾಯ್ತ ಅಂತ.!