Sunday, March 4, 2012

ಮೋಸ.

ಮಧ್ಯಾಹ್ನ ಊಟ ಮಾಡಿ ಇನ್ನೇನು ಹಾಸಿಗೆ ಕೊಡವಬೇಕೆನ್ನುವಷ್ಟರಲ್ಲಿ ಗೆಳತಿಯ ಫೋನ್ ಬಂತು..೪ ನೇ ಬ್ಲಾಕ್ ಗೆ ಹೋಗಿ ಬರೋಣ ಬಾ.ನನ್ನ ಕೊಲೀಗ್ ಗೆ ಬಸ್ ಪಾಸ್ ಮಾಡಿಸ್ಬೇಕಂತೆ ಅಂದ್ಲು .(( ಆ ಕೊಲೀಗ್ ನಾರ್ಥಿ. ಲಾಸ್ಟ್ ವೀಕ್ ಬಸ್ ಪಾಸು ಮಾಡಿಸುವಲ್ಲಿ ಹೋಗಿ ಕೇಳಿಕೊಂಡು ಬಂದಿದ್ದಾಳೆ ಏನೇನು ಬೇಕು ಎಂದು. ಅವನು ಕನ್ನಡದಲ್ಲಿ ಹೇಳಿದ್ದಾನೆ ಇವಳಿಗೆ ತಲೆ ಬುಡ ಅರ್ಥ ಆಗದೆ ಹಾಗೆ ವಾಪಸ್ ಬಂದಿದ್ದಾಳೆ.ಇವಳ ಹತ್ತಿರ ಬಂದು ನಿನಗೆ ಕನ್ನಡ ಗೊತ್ತಲ್ವ ನನಗೆ ಬಸ್ ಪಾಸು ಮಾಡಿಸ್ಕೊಡು.ಇ ಆಟೋ ದವರ ಹತ್ತಿರನು ಹೀಗೆ ಕಷ್ಟ ಆಗುತ್ತೆ ಏನು ಮಾತಾಡುತ್ತಾರೋ ಒಂದು ತಿಳಿಯಲ್ಲ ಬೇಗ ಕನ್ನಡ ಕಲಿಬೇಕು ಅಂತಿದ್ಲಂತೆ.ನನಗೂ ಹಾಗೆ ಹಿಂದಿ ಮಾತಾಡಿದ್ರೆ ಅರ್ಥ ಆಗಲ್ಲ.ಗೊಲ್ಗಪ್ಪ ತಿನ್ಬೇಕು ಅಂದ್ರೆ ತುಂಬಾ ಕಷ್ಟ :P)) ನಾನು  ಈಗ ರೆಡಿ ಆಗಿ ಬರೋದ್ರೊಳಗೆ ೨೦ ನಿಮಿಷ ಆಗೋಗತ್ತೆ ನೀವ್  ಇಬ್ರೆ ಹೋಗಿ ಬನ್ನಿ ಅಂದೆ .ಏನು ಪರವಾಗಿಲ್ಲ ನನಗೆ  ಶಾಪಿಂಗ್ ಕೂಡ ಇದೆ ನೀನು ಬಾ ಕಾಯ್ತಿವಿ. ಬೇಗ ಬಾ ಸ್ಟಾಪ್ ಗೆ ಅಂದ್ಲು. ಸರಿ ಎಂದು ಯಾವುದೊ ಪ್ಯಾಂಟ್ ಶರ್ಟ್ ಹಾಕಿ ಮುಖ ತೊಳೆದು ಹೊರಟೆ. 
ದಿನ ಒಂದರ ಹಿಂದೆ ಒಂದು ಬರುವ ಬಸ್ ಇವತ್ತು ಒಂದು ಇಲ್ಲ .ಯಾವಾಗ್ಲೂ ನಾವು ಹೊರಟಾಗ ನಾವು ಹೋಗುವಲ್ಲಿಗೆ ಬಸ್ ಬರಲ್ಲ ಬಿಡಿ. ಆಟೋ ದಲ್ಲಿ ಹೊರಟ್ವಿ. ಪಾಸು ಮಾಡಿಸುವಲ್ಲಿ ೩ ಜನ ಇದ್ರು ಅಷ್ಟೆ .ಕ್ಯು ಇರ್ಲಿಲ್ಲ. ಒಬ್ನು ಬಂದು ಇ ನಾರ್ಥಿ ಹತ್ತಿರ ಇಂಗ್ಲಿಷ್ ನಲ್ಲಿ ಬೆಳಗ್ಗೆ ನಾನು ೭೭೫ ಪಾಸ್ ತಗೊಂಡ್ ಹೋಗ್ಬಿಟಿದೀನಿ.ನನಗೆ 550 ದು ಬೇಕಾಗಿತ್ತು .ನಿಮಗೆ ಹೇಗಿದ್ರು ೭೭೫ ದು ಬೇಕಲ್ವ ಇಬ್ರು ಬದಲಾಯಿಸಿಕೊಳ್ಳೋಣ ಅಂದ. ಅವಳಿಗೆ ಅವನು ಏನು ಹೇಳ್ತಿದಾನೆ ಅಂತ ಸರಿಯಾಗಿ  ಅರ್ಥ  ಆಗ್ಲಿಲ್ಲ ಕಷ್ಟ ಪಟ್ಟು ಫುಲ್ ತಿಳಿಸಿದ್ದಾಯ್ತು . ಅವನೇ ಪಾಸ್  ನು ತಂದ್ಕೊಟ್ಟ 550 ಇಸ್ಕೊಂಡು. ಆಮೇಲೆ ಬಂದು ಮೇಡಂ ೨೨೫ ಈಗ ನೀವು ನಂಗೆ ಕೊಡ್ಬೇಕು ಅಂದ.ಇವಳ ಹತ್ತಿರ ಚೇಂಜ್ ಇರ್ಲಿಲ್ಲ ೩೦೦ ಅವನಿಗೆ ಕೊಟ್ಟು ಚೇಂಜ್ ಕೊಡಿ ಅಂದ್ಲು.ಅವ್ನು ನನ್ನ ಹತ್ತಿರವೂ ಚೇಂಜ್ ಇಲ್ಲ ಇರಿ ಯಾರ ಹತ್ತಿರವಾದರು ಇಸ್ಕೊಡ್ತೀನಿ ಅಂತ ಅಲ್ಲೇ ೩ ಜನರನ್ನ ಕೇಳಿದ ಹಾಗೆ ಮಾಡಿದ ಅವ್ರ ಹತ್ತಿರ ಇರ್ಲಿಲ್ಲ ಅಂತ ಪಕ್ಕದ ಆಫೀಸ್ ಲಿ ತಗೋ ಬರ್ತೀನಿ ಅಂತ ಹೇಳಿ ಹೊರಟ.ಇವಳಿಗೆ ಏನು ಎನಿಸಿತೋ ಗೊತ್ತಿಲ್ಲ ಇರಿ ೫೦ ಇದೆ ನಂ ಹತ್ರ ೧೦೦ ವಾಪಾಸ್ ಕೊಡಿ ಅಂತ ತಗೊಂಡ್ಲು..ಇನ್ನು ೨೫ ಚೇಂಜ್ ತಗೋ ಬನ್ನಿ ಅಂತ ಅವನ್ನ ಕಳಿಸಿ ಆಯಿತು..ಫುಲ್ ಪೆದ್ದರಾಗಿದ್ದು ಅಲ್ಲೇ..೩ ಜನರಲ್ಲಿ ಒಬ್ಬರಾದರು ಅವನ ಜೊತೆ ಹೋಗಬೇಕಿತ್ತು..ಆ ಅಸಾಮಿ ಹೊದೊವ್ನು ವಾಪಾಸ್ ಬಂದೆ ಇಲ್ಲ ನಾವು ಅರ್ಧ ಗಂಟೆ ಅಲ್ಲೇ ಕಾದಿದ್ದಾಯ್ತು.ಅವಳಂತೂ ಬೈತಾ ಇದಾಳೆ ಇ banglore  ಲಿ ಯಾರನ್ನು  ನಂಬಲು ಆಗೋಲ್ಲ ಸುಮ್ನೆ ನಾವು ಡೈರೆಕ್ಟ್ ಆಗಿ ಅಲ್ಲೇ ಪಾಸು ತಗೊಬೋದಿತ್ತು ಏನೋ ಭಾರಿ ಗೊತ್ತಿದ್ದವಳ ಹಾಗೆ ಹೇಳಿದೆ ಈಗ ನೋಡು ಅವನು ಬರೋದಿಲ್ಲ ಎಷ್ಟು ಕಾದರು ಅಷ್ಟೆ  .ನಡಿ ಹೋಗೋಣ. ನನಗೆ ಇವತ್ತು ಫುಲ್ ಲಾಸ್ ಅವನು ಏನೋ ಇಂಗ್ಲಿಷ್ ಲಿ ಹೇಳ್ತಿದ್ದ ನೀನು ಮತ್ತೆ  ಕನ್ನಡ ದಲ್ಲಿ ಮಾತನಾಡಿ ನನಗೆ ಏನು ಗೊತ್ತಾಗ್ದೆ ಇರೋ ತಾರಾ ಮಾಡ್ದೆ ಅಂತ ಹೇಳಿದ್ಲು.
ಅವಳನ್ನ ಅವಳ ಏರಿಯ ಬಸ್ ಹತ್ತಿಸಿ ವಾಪಾಸ್ ಬಂದ್ವಿ ನಾವಿಬ್ರು.ನನ್ನ ಫ್ರೆಂಡ್ ಹೇಳಿದ್ಲು ಅವಳು ಸಿಕ್ಕಾಪಟ್ಟೆ ಕರ್ಚು ಮಾಡೋಕೆ ಹಿಂದೆ ಮುಂದೆ ನೋಡ್ತಾಳೆ .ಇನ್ನು ಇದನ್ನೇ ೧ ವೀಕ್ ಹೇಳ್ತಾ ಇರ್ತಾಳೆ ಕನ್ನಡದವರಿಗೆ ಬೈತಾ ಇರ್ತಾಳೆ. ಅವ್ನು ಬಂದು ಕೊಟ್ಟಿದ್ರೆ ಚನಾಗಿತ್ತು ಅಂದ್ಲು . ಅದಕ್ಕೆ ಅಂದೆ ನೀನು ಎಷ್ಟು ಹುಡುಕಿದರು ಅವನು ಬರಲ್ಲ  ಒಂದು ಕೆಲಸ ಮಾಡು ಅವಳಿಗೆ ಈಗಲೇ ಫೋನ್ ಮಾಡಿ ಹೇಳು ನಾವು ನಿನ್ನ ಬಿಟ್ಟು ವಾಪಾಸ್ ಪಾಸ್ ಮಾಡಿಸಿದ ಜಾಗದಿಂದನೆ ಬಂದ್ವಿ .ಅವನು ಅಲ್ಲೇ ಕಾಯ್ತಾ ಇದ್ದ .೨೫ ವಾಪಾಸ್ ಕೊಟ್ಟಿದಾನೆ ಅಂತ ಹೇಳು . ಹೇಗಿದ್ರು ನಿನ್ನ ಫ್ರೆಂಡ್ ಅಲ್ವ ಇಷ್ಟು ಸುಳ್ಳು, ಕರ್ಚು ಮಾಡಿದ್ರೆ ಏನು ಆಗಲ್ಲ ಅಂದೆ..ಅವಳಿಗೂ ಸರಿ ಅನಿಸಿತ್ತು ಎನಿಸುತ್ತೆ ..ತಕ್ಷಣ ಫೋನ್ ಮಾಡಿ ಹೇಳಿದ್ಲು..ಫೋನ್ ಇಟ್ಟ ಸ್ವಲ್ಪ ಹೊತ್ತಿನಲ್ಲೇ ಅವಳ ಫೋನ್ ಬಂತು ಪಾಸ್ ಎಸ್ಟ್ ದಿನ ವ್ಯಾಲಿಡಿಟಿ,ಎಲ್ಲೆಲ್ಲಿಗೆ ಬರತ್ತೆ ಎಲ್ಲ ವಿಚಾರಸಿ ಬಾ.ಇವಳು ಫೋನ್ ಇಟ್ಟು ಹೇಳಿದ್ಲು  ಅಬ್ಬ ಸದ್ಯ ಅವಳ ಮಾತಿನಲ್ಲಿ ಈಗ ಸಮಾಧಾನ ಕಾಣ್ತಾ ಇದೆ ಅಂತ. ಸ್ಮೈಲ್ ಮಾಡಿ ಸುಮ್ಮನಾದೆ ..
ಮೂಡ ನಂಬಿಕೆಯನ್ನು ನಂಬದಿದ್ದರೂ ಮನಸಿನ ಒಂದು ಮೂಲೆಯಲ್ಲಿ ಅನಿಸುತ್ತಿತ್ತು ೩ ಜನ ಹೋಗಿದ್ದಕ್ಕೆ ಹೀಗಾಯ್ತ ಅಂತ.!