Wednesday, January 16, 2013

ಬಹುರೂಪಿ ನಾಟಕಗಳು


        ಕಳೆದ ಒಂದು ವಾರ ಬಹುರೂಪಿ ನಾಟಕಗಳು ರಂಗಾಯಣ ಮೈಸೂರ್ ನಲ್ಲಿ ಇತ್ತು. ಯಾವುದಾದರೊಂದು ದಿನ ಹೋಗೋಣ ಅಂತ ಅಂದು ಕೊಳ್ಳೋದ್ರೊಳಗೆ ಮುಗಿಯೋ ದಿನ ಹತ್ತಿರ ಬಂದುಬಿಟ್ಟಿತ್ತು.ಮುಗಿಯುವ ದಿನದ ಹಿಂದಿನ ದಿನ ಹೋಗಿಬಿಡೋಣ ಅಂತ ತೀರ್ಮಾನಿಸಿ ಯಾವ ನಾಟಕ ಅಂತ ಪೇಪರ್ ನೋಡಿದ್ರೆ ನಮಗೆ ಬೇಕಾದ ೬ ಗಂಟೆಯ ಶೋ ನಲ್ಲಿ ಯಾವುದೊ ಮಲಯಾಳಂ ಇತ್ತು . ರಾಮಧಾನ್ಯ ಅನ್ನೋ ನಾಟಕ ೩:೩೦ ಕ್ಕೆ ಮತ್ತು ನೀರು ಅನ್ನೋ ನಾಟಕ ೭ ಗಂಟೆಗೆ ಇತ್ತು .ಆದರೆ ಅದರ ಪಕ್ಕಕ್ಕೆ ಹಿಂದಿನ ದಿನದ ನಾಟಕಕ್ಕೆ ಟಿಕೆಟ್ ಸಿಗಲಿಲ್ಲ ಅನ್ನೋದು ಇದ್ದಿದ್ರಿಂದ ಡೌಟ್ ಆಯ್ತು  ಇವತ್ತು ನಮಗೆ ಸಿಗೋದ್ ಕಷ್ಟ ಅಂತ ಏಕೆಂದರೆ ಅವತ್ತು ಸಂಡೇ !! ಅಪ್ಪ ಅವರ ಸ್ನೇಹಿತರಿಗೆ (ಅವರು ರಂಗಾಯಣದಲ್ಲಿ ತುಂಬಾ ನಾಟಕಗಳನ್ನು ಮಾಡಿದವರು ) ಫೋನ್ ಮಾಡಿ ಟಿಕೆಟ್ ಸಿಗಬಹುದ ಅಂತ ವಿಚಾರಿಸಿದರೆ ಅವ್ರು ೭ ಗಂಟೆದಕ್ಕೆ ಕಷ್ಟ ೩:೩೦ ಕ್ಕೆ ಇರೋದಕ್ಕೆ ಸಿಗುತ್ತೆ ಬಂದ್ಬಿಡಿ ಅಂದ್ರು.. ಆದ್ರು  ಅನುಪ್ ನ ನಾಟಕದ ಸರ್ ಗು ಫೋನ್ ಮಾಡಿ ಇವತ್ತು ಹೋಗೋಣ ಅಂತ ಇದೆ ಟಿಕೆಟ್ ವ್ಯವಸ್ತೆ ಎಲ್ಲ ಹೇಗೆ ಅಂತ ಕೇಳಿದ್ರೆ  ಅವರು ಡೆಲ್ಲಿಗೆ ಹೊರಟ್ಟಿದ್ದಾರೆ ಅವತ್ತೇ.ಟಿಕೆಟ್ ಸಿಗ್ಲಿಲ್ಲ ಅಂದ್ರೆ ಆಫೀಸ್ ನಲ್ಲಿ ಒಬ್ಬರಿರ್ತಾರೆ ಅವರನ್ನ ಒಂದು ಸಲ ವಿಚಾರ್ಸು ಸಿಗಬಹುದು ಅಂದ್ರು. ಅಷ್ಟೋತ್ತಿಗೆ ೨:೩೦ ಆಗಿ ಹೋಗಿತ್ತು. ಬೇಗ ಬೇಗ ರೆಡಿ ಆಗಿ ೩:೦೦ ಗೆ ಮನೆ ಇಂದ ಹೊರಟ್ವಿ. ಅಲ್ಲಿ ಹೋಗಿ ನೋಡಿದ್ರೆ ಎಷ್ಟೊಂದು ಕಾರುಗಳು ರೋಡಿನ ಆ ಬದಿ ಈ ಬದಿಗೆಲ್ಲ. ಅಲ್ಲೇ ಇದ್ದ ಒಂದು ಜಾಗದಲ್ಲಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಯಾರೋ ಸ್ಟಾಲ್ ಲಿ ಇದ್ದೋರು ತುಂಬಾ ದಿನದ ಪರಿಚಯದಂತೆ ಆರಾಮ ? ಅಂದ್ರು ಅಪ್ಪ  ನಿಮ್ದು  ಇದ್ದ  ನಾಟಕ ಕೇಳಿದ್ದಕ್ಕೆ  ಬಡಾವಣ ಬಹುರೂಪಿ ಅಂತ ಪ್ರತಿ ಏರಿಯ ದಲ್ಲೂ ಮಾಡ್ತಾ ಇದ್ಯ ಅಂದ್ರು. ಆಮೇಲೆ ತಿಳೀತು ನಮ್ಮ ಏರಿಯ ದಲ್ಲೂ ೨ ದಿನ ಬಡಾವಣ ಯಕ್ಷಗಾನ ನಡೆದಿದ್ದು ಇವರದ್ದೇ ಅಂತ .ಸ್ವಲ್ಪ ಮಾತಾಡಿ ಎಲ್ಲಿ ಟಿಕೆಟ್ ತಗೊಳ್ಬೇಕು ಕೇಳಿ ಆಕಡೆ ಹೋಗೋವಾಗ ಯಾರವರು ಅಂತ ಕೇಳಿದ್ರೆ ನಂಗೇನ್ ಗೊತ್ತು ಅಂತಿದಾರೆ !!ಅಲ್ಲೇ ಪಕ್ಕದಲ್ಲಿ ಒಬ್ಬ ಕಲಾವಿದ ಬಿಡಿಸಿದ ೩ಡಿ  ಕಪ್ಪೆ ಇತ್ತು ಅದು ಬರಿ ಕಣ್ಣಿನಿಂದ ನೋಡಿದ್ರೆ ಏನೋ ಚಿತ್ರ ಅಂತ ಅನಿಸ್ತಿತ್ತೆ ಹೊರತು ಕಪ್ಪೆ ಅನ್ನೋದು ಗೊತ್ತಾಗ್ತಿರ್ಲಿಲ್ಲ .

 
ಕ್ಯಾಮರಾ ದಿಂದ ಒಂದು angle ಇಂದ ತೆಗೆದರೆ ಕಪ್ಪೆ ಅನ್ನೋದು ಸ್ಪಷ್ಟ ವಾಗಿ ಗೊತಾಗ್ತಿತ್ತು . 
 
ಅದರ ಫೋಟೋ ತೆಗೆದು ಕೊಂಡು ಟಿಕೆಟ್ ಕೌಂಟರ್ ಗೆ ಹೋಗಿ ಟಿಕೆಟ್ ತೆಗೆದು ಕೊಂಡು (ಟಿಕೆಟ್ ಇತ್ತು ಸದ್ಯ ) ಒಳಗೆ ಹೋಗಿ ನಮ್ಮ ಜಾಗದಲ್ಲಿ ಕುಳಿತಾಯ್ತು. ೩:೪೦ ಕ್ಕೆ ರಾಮಧಾನ್ಯ ನಾಟಕ ಶುರುವಾಯ್ತು . ಅದರಲ್ಲಿ ಕಾಳಿದಾಸ ಕೃಷ್ಣ ದೇವಾಲಯಕ್ಕೆ ಬಂದಿದ್ದನೆಂದು ಅಲ್ಲಿನ ಬ್ರಾಹ್ಮಣರು ಅವರನ್ನು ಹೊರಗೆ ದಬ್ಬಿ  ಬೈದಿದ್ದರಿಂದ ಹಿಡಿದು ರಾಮ ರಾಗಿಯನ್ನು ಇಷ್ಟ ಪಟ್ಟಿದ್ದರಿಂದ ರಾಘವ ಅಂತ ಹೆಸರು ಬಂತು ಎಂದು ತಮಾಷೆಯಾಗಿ ಎನ್ನುವುದರೊಂದಿಗೆ ನಾಟಕ ೫ ಗಂಟೆಗೆ ಮುಗಿದಿತ್ತು ..ಅಲ್ಲೇ ಪಕ್ಕದಲ್ಲಿ ಬೀದಿ ನಾಟಕ ನಡಿತಿತ್ತು ಅದರ ಒಂದು ತುಣುಕು ಈ ಕೆಳಗೆ ಮಜವಾಗಿದೆ 



ಈ ನಾಟಕ ಮುಗಿದಮೇಲೆ ಕಳಾರಿಪಯಟ್ ಅನ್ನೋ ಬೆಂಕಿಯ ಸಾಹಸ ಇತ್ತು ಅದನ್ನು ನೋಡಿ ಪಕ್ಕದಲ್ಲೇ ಇದ್ದ ಸ್ಟಾಲ್ ಗಳನ್ನೆಲ್ಲ ಸುತ್ತಾಡಿ  ಮನೆಗೆ  ಬಂದ್ವಿ ..